'ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ'
ಚಿಂತಾಮಣಿ: ರಾಜ್ಯ ಒಕ್ಕಲಿಗರ ಸಂಘವು ಒಗ್ಗಟ್ಟಿನ ಕೊರತೆಯಿಂದ ಕಾಲೆಳೆಯುವ ಬುದ್ಧಿ, ಸ್ವಾರ್ಥ ಮತ್ತು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಲು ದಕ್ಷ ನಾಯಕರ ಕೊರತೆಯಿದೆ ಎಂದು ಕೋಲಾರ - ಚಿಕ್ಕಬಳ್ಳಾಫುರ ನಿರ್ದೇಶಕರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಭಾಗವಹಿಸುತ್ತಿರುವ ಡಾ. ಡಿ.ಆರ್. ರಮೇಶ್ ಮನವಿ ಮಾಡಿದರು. ಪಟ್ಟಣದ ಒಕ್ಕಲಿಗರ ಸಮುದಾಯದ ಪ್ರಮುಖರ ಮನೆಗಳಿಗೆ ತೆರಳಿ ಮುಂದಿನ ತಿಂಗಳು 5ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ನೀಡುವಂತೆ ಮನವಿ ಮಾಡಿದರು. ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಅನಾವಶ್ಯಕವಾಗಿ ಜಾತಿ ನಿಂದನೆ ಪ್ರಕರಣಗಳು ಹೆಚ್ಚು ದಾಖಲು ಆಗುತ್ತಿದ್ದು, ಅವುಗಳಲ್ಲಿ ಬಹುತೇಕ ಪ್ರಕರಣಗಳನ್ನು ಹಿಂಪಡೆಯುವಂತೆ ಮಾಡಿ ರೈತರ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಟ್ಟಿದ್ದೇನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಹೆಬ್ಬರಿಯ ಪಟೇಲ್, ವಕೀಲ ಈಶ್ವರ ಗೌಡ, ಅಶ್ವತ್ಥ್ ನಾರಾಯಣರೆಡ್ಡಿ, ಶಿವಾರೆಡ್ಡಿ, ದೇವರಾಜ್, ಆರ್.ಶ್ರೀನಿವಾಸ್, ಮಂಜುನಾಥರೆಡ್ಡಿ, ವೆಂಕಟಶಿವಾರೆಡ್ಡಿ, ರಘುನಾಥರೆಡ್ಡಿ, ವೆಂಕಟರೆಡ್ಡಿ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.