ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೆಮಿಸ್ಟರ್ ಪದ್ಧತಿ ವಿರೋಧಿಸಿ ಪ್ರತಿಭಟನೆ

Mainashree
Updated On : 27 Dec 2013, 11:17 am

ಗೌರಿಬಿದನೂರು: ಐಟಿಐ ಪಠ್ಯಕ್ರಮದಲ್ಲಿ ಮುನ್ಸೂಚನೆ ಇಲ್ಲದೆ ಸೆಮಿಸ್ಟರ್ ಪದ್ಧತಿ ಅಳವಡಿಸುತ್ತಿರುವುದನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನಾರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಎಬಿವಿಪಿ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಕೇಂದ್ರ ತಾಂತ್ರಿಕ ನಿರ್ದೇಶನಾಲಯದ ಆದೇಶದಂತೆ ಡಿಜಿಇಟಿ ಪದ್ಧತಿ ಅಳವಡಿಸಿದೆ. ಈ ಪದ್ಧತಿಯಿಂದ ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ನಡೆಯಲಿದ್ದು ಜೊತೆಗೆ 4 ಪಠ್ಯದ 2 ಪರೀಕ್ಷೆಗಳು ಒಂದೇ ದಿನ ನಡೆಯಲಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ಆಗಲಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಹರೀಶ್ ಮಾತನಾಡಿ, ಸೆಮಿಸ್ಟರ್ ಪದ್ಧತಿ ಸೂಕ್ತ ಮಾಹಿತಿ ನೀಡದೆ ದೀಢೀರನೆ ಜಾರಿ ಮಾಡಿರುವುದು ವಿಧ್ಯಾರ್ಥಿಗಳಿಗೇ ಅಲ್ಲದೆ ಅಧ್ಯಾಪಕರಿಗೂ ಶಾಕ್ ನೀಡಿದಂತಾಗಿದೆ ಎಂದರು. ಪ್ರತಿಭಟನೆಯಲ್ಲಿ ಸುನಿಲ್, ಚರಣ್, ವಿಜಿಕುಮಾರ್, ಪವಿತ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement