ಇಂದು ಸಿ. ಅಶ್ವಥ್ ಸಂಸ್ಮರಣೆ ಕಾರ್ಯಕ್ರಮ
ಕೋಲಾರ: ಖ್ಯಾತ ಗಾಯಕ ದಿವಂಗತ ಸಿ. ಅಶ್ವಥ್ ಅಭಿಮಾನಿಗಳ ಬಳಗದಿಂದ ಡಿ.29 ರಂದು ಬೆಳಿಗ್ಗೆ ನಗರದ ಕಾರಂಜಿ ಕಟ್ಟೆ ರಸ್ತೆಯಲ್ಲಿನ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಸಿ. ಅಶ್ವಥ್ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಅಭಿಮಾನಿಗಳ ಬಳಗದ ಅಧ್ಯಕ್ಷ ಸ್ಪಂದನ ರಂಗನಾಥ್ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಆಂತರಗಂಗಾ ವಿದ್ಯಾ ಸಂಸ್ಧೆಯ ಬುದ್ಧಿ ಮಾಂದ್ಯ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುವುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.