ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುಡಿಬಂಡೆಯಲ್ಲಿ ಸಿರಿಗನ್ನಡ ವೇದಿಕೆ ಅಸ್ತಿತ್ವಕ್ಕೆ

Rashmi Kasaragodu
Updated On : 29 Dec 2013, 1:43 am

ಗುಡಿಬಂಡೆ; ಪಟ್ಟಣದ ಸರ್ಕಾರಿ ಬಾಲಕರ ಪ್ರೌಡಶಾಲೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ ತಾಲೂಕು ಸಿರಿಗನ್ನಡ ವೇದಿಕೆ ಘಟಕದ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ಸಾಹಿತ್ಯಾತ್ಮಕ ಚಟುವಟಿಕೆ ಹಾಗೂ ಕನ್ನಡ ಭಾಷೆಯ ಹಿರಿಮೆಯನ್ನು ಸಾರುವ ನಿಟ್ಟಿನಲ್ಲಿ ವೇದಿಕೆಯನ್ನು ಹುಟ್ಟು ಹಾಕಲಾಗಿದೆ. ಗಡಿಭಾಗದ ಈ ಪ್ರದೇಶದಲ್ಲಿನ ವಿದ್ಯಾರ್ಥಿಗಳು, ಯುವಜನತೆ ವೇದಿಕೆಯ ಸದಸ್ಯರಾಗುವ ಮೂಲಕ ಸಹಕಾರ ನೀಡಬೇಕೆಂದು ಕೋರಿದರು. ಘಟಕದ ತಾಲೂಕು ಅಧ್ಯಕ್ಷ ಮ.ಗ. ಹೆಗಡೆ ಎಲೆಮರೆಯ ಕಾಯಿಯಂತಿರುವ ಕವಿಗಳು ಮತ್ತು ಸಾಹಿತಿಗಳಿಗೆ ಉತ್ತೇಜನ ನೀಡುವ ಪ್ರಯತ್ನ ವೇದಿಕೆಯದ್ದಾಗಿದೆ ಎಂದರು. ಉದ್ಘಾಟನೆ ಅಂಗವಾಗಿ ಶಾಲಾ ಮಕ್ಕಳಿಗೆ ಕಾವ್ಯ ಕಮ್ಮಟ ಏರ್ಪಡಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಬಗೆಯ ಕವನಗಳನ್ನು ರಚಿಸುವ ಮೂಲಕ ಗಮನ ಸೆಳೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಹಾಜರಿದ್ದ ಗಣ್ಯರು ಬಹುಮಾನ ವಿತರಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಸ.ನ. ನಾಗೇಂದ್ರ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೆಂಕಟಾಚಲಯ್ಯ, ಎಂ.ಆರ್. ನಾಗರಾಜರಾವ್, ರಫಿಕ್, ಫಯಾಜ್, ವಿ. ಗಂಗಾಧರ್, ಎನ್. ರಾಮಮೂರ್ತಿ ಇದ್ದರು.
ಕ್ಷುಲ್ಲಕ ಕಾರಣಕ್ಕೆ ಘರ್ಷಣೆ; ಬಂಧನ
ಶಿಡ್ಲಘಟ್ಟ: ಕದಿರಿನಾಯಕನ ಹಳ್ಳಿ ಗ್ರಾಮ ಠಾಣೆಯಲ್ಲಿ ನಾಗರಾಜು ಎಂಬವರು ಬೆಳೆದಿರುವ ರಾಗಿ ಬೆಳೆಯನ್ನು ಬೇರೆ ವರ್ಗದವರು ಕಟಾವು ಮಾಡಲು ಹೋಗಿ ಮಾರಾಮಾರಿ ನಡೆದಿರುವ ಪ್ರಕರಣ ನಡೆದಿದೆ. ಕದಿರಿನಾಯಕನಹಳ್ಳಿಯ ನಿವಾಸಿ ನಾಗರಾಜ್ ಎಂಬವರು ಗ್ರಾಮಠಾಣೆಯಲ್ಲಿ ರಾಗಿ ಹಾಕಿದ್ದು ಪಸಲಿಗೆ ಬಂದ ಸಂದರ್ಭದಲ್ಲಿ ಅದೇ ಊರಿನ ಪರಿಶಿಷ್ಟ, ಪರಿಶಿಷ್ಟ ಪಂಗಡಕ್ಕೆ ಸೇರಿದ ಮುನಿವೆಂಕಟಪ್ಪ ನಾಗರಾಜ್ ಬೆಳೆದಿರುವ ರಾಗಿ ತನ್ನದು ಎಂದು ಕಟಾವು ಮಾಡಲು ಹೋದಾಗ, ನಾಗರಾಜು ಅಡ್ಡಪಡಿಸಿದ್ದು, ಇಬ್ಬರ ಮಧ್ಯೆ ಗಲಾಟೆಯಾಗಿದೆ. ಪೊಲೀಸರು ಮಧ್ಯೆಪ್ರವೇಶಿಸಿ ನಾಗರಾಜು ಹಾಗೂ ಸಂಬಂಧಿಕರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣವು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement