ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಆಡಳಿತ'

Rashmi Kasaragodu
Updated On : 30 Dec 2013, 2:49 am

ಗೌರಿಬಿದನೂರು: ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ಸರ್ಕಾರಗಳು ಆಡಳಿತ ನಡೆಸಿ ದಲಿತ ಸಮುದಾಯವನ್ನು ವಿನಾಶದ ಹಂಚಿಗೆ ಕೊಂಡೊಯ್ಯುತ್ತಿರುವುದು ವಿಷಾಧನೀಯ ಎಂದು ಪ್ರೊ.ಕೆ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಆಚಾರ್ಯ ಫ್ರೌಢಶಾಲೆಯ ಪ್ರಾರ್ಥನಾ ಮಂದಿರದಲ್ಲಿ ವಿಚಾರ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಚಾರಣ ಸಂಕಿರ್ರದಲ್ಲಿ ಮಾತನಾಡಿ, ದಲಿತ ಸಂಘಟನೆಗಳು ಚಳುವಳಿ ಮುಖಾಂತರ ಪ್ರಗತಿಪರ ಚಳುವಳಿ ನಡೆಸಿ ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಅಧ್ಯಕ್ಷತೆ ಭಾಷಣ ಮಾಡಿದ ಪ್ರಗತಿಪರ ಚಿಂತಕ ಪ್ರೊ.ಬಿ. ಗಂಗಾಧರ ಮೂರ್ತಿ, ರಾಜ್ಯ ಮಟ್ಟದ ದಲಿತ ನಾಯಕರು ಸ್ವಾರ್ಥ ಮನೋಭಾವದಿಂದ ದಲಿತ ಸಂಘಟನೆ ಶಕ್ತಿ ವಿನಾಶದ ಹಂಚಿಗೆ ಸಾಗಿದೆ ಎಂದು ಆರೋಪಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಗೀತಾಜಯಂದರ್ ಮಾತನಾಡಿ, ದಲಿತ ಹೋರಾಟಗಳು ಇಂದು ಕಣ್ಮರೆಯಾಗುತ್ತಿವೆ. ಅಂಬೇಡ್ಕರ್ ಆಶಯಗಳು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು. ಕೆ. ಕೊಮ್ಮಣ್ಣ, ಎಚ್.ಎಂ. ರಾಮಚಂದ್ರ, ಚೆನ್ನಪ್ಪ, ಎಂ.ಆರ್. ಸತ್ಯನಾರಾಯಣ, ಎಚ್.ಎಲ್. ವೆಂಕಟೇಶ್, ಶಿಕ್ಷಕ ಆದಿನಾರಾಯಣಪ್ಪ ಮಾತನಾಡಿದರು. ಸಿ.ಜಿ. ಗಂಗಪ್ಪ, ಪಿ. ನರಸಿಂಹಮೂರ್ತಿ, ವೈಟಿ ಪ್ರಸನ್ನ, ಪಿಡಿಸಲಹಳ್ಳಿ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement