ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಗೆ 50 ನೂತನ ಬಸ್

Rashmi Kasaragodu
Updated On : 30 Dec 2013, 2:47 am

ಆರ್. ರಜನೀಕಾಂತ್
ಕೆಜಿಎಫ್: ಕೇಂದ್ರ ಸರ್ಕಾರದ ನೂತನ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ಬಸ್ ಸೇವೆ ಕಲ್ಪಿಸಲು ಕೋಲಾರ ಜಿಲ್ಲೆಗೆ ಈಗಾಗಲೇ 50 ನೂತನ ಬಸ್ಗಳ ಬಿಡುಗಡೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ 50 ಬಸ್ಗಳಿಗೆ ಡಿಪೋಗಳನ್ನು ಪ್ರಾರಂಭಿಸಲು ಸ್ಥಳವಿಲ್ಲದ ಕಾರಣ ಈಗಾಗಲೇ ಕೆಜಿಎಫ್ ನಗರಸಭೆ ಪಕ್ಕದಲ್ಲಿ ಕಳೆದ 8 ವರ್ಷಗಳ ಹಿಂದೆ ಸುಮಾರು 70 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ್ದ ಸರ್ಕಾರಿ ಬಸ್ ನಿಲ್ದಾಣ ಪ್ರಯಾಣಿಕರು ಬಾರದೆ ನೆನೆಗುದ್ದಿಗೆ ಬಿದ್ದಿದ್ದು ಇಲ್ಲಿ ರಾಜ್ಯ ರಸ್ತೆ ಸಾರಿಗೆಯ 2ನೇ ವಿಶೇಷ ಬಸ್ ಘಟಕ ಪ್ರಾರಂಭಿಸಲು ಸಾರಿಗೆ ಸಂಸ್ಥೆ ಕೇಂದ್ರ ವಿಭಾಗದ ಅಧಿಕಾರಿಗಳ ತಂಡ ಈಗಾಗಲೇ ನೂತನ ಬಸ್ ಮಾರ್ಗಗಳ ಸರ್ವೇ ಪೂರ್ಣಗೊಳಿಸಿದೆ.
ಕೇಂದ್ರ ಸರ್ಕಾರದ ನೂತನ ಯೋಜನೆಯಡಿ ಬಿಡುಗಡೆಯಾಗುವ 50 ಬಸ್ಗಳಿಗೆ ವಿಶೇಷ 2ನೇ ಬಸ್ ಡಿಪೋ ನಿರ್ಮಾಣಕ್ಕೆ 6 ಕೋಟಿ ಅನುದಾನ ಬಿಡುಗಡೆಯಾಗಲಿದ್ದು ಮುಂದಿನ ವರ್ಷ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಾರಿಗೆ ಸಂಸ್ಥೆಯ ಮೂಲಗಳಿಂದ ತಿಳಿದುಬಂದಿದೆ.
ಪ್ರಥಮ ಹಂತವಾಗಿ ಕೋಲಾರ ಜಿಲ್ಲೆಗೆ 40 ಬಸ್ಗಳು ಬಿಡುಗಡೆಯಾಗಲಿದ್ದು, ಅದರಲ್ಲಿ 25 ಬಸ್ಗಳು ಕೋಲಾರಕ್ಕೆ ಉಳಿದ 15 ಬಸ್ಗಳು ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಒದಗಿಸಲಿವೆ. ಕೆಜಿಎಫ್ನ ಚಾಂಪಿಯನ್ರೀಫ್, ಮಾರಿಕುಪ್ಪಂ, ಆಂಡ್ರಸನ್ಪೇಟೆ, ಉರಿಗಾಂ, ರಾಬರ್ಟ್ಸನ್ಪೇಟೆ, ಬೇತಮಂಗಲ, ಕ್ಯಾಸಂಬಳ್ಳ ಪ್ರದೇಶಗಳಿಂದ ಬರುವ ಸಾರ್ವಜನಿಕರಿಗೆ ಈ ಸರ್ಕಾರಿ ಬಸ್ಗಳು ಹೆಚ್ಚು ಅನುಕೂಲವಾಗಿದ್ದು ಖಾಸಗಿ ಬಸ್ಗಳು, ಆಟೋಗಳಿಗೆ ನೀಡುವ ಹೆಚ್ಚಿನ ಶುಲ್ಕವನ್ನು ತಪ್ಪಿಸಿದಂತಾಗುತ್ತದೆ.
ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲವೊಂದು ಮಾರ್ಗಗಳಲ್ಲಿ ಸರ್ಕಾರಿ ಸಾರಿಗೆ ಬಸ್ಗಳ ಸೌಲಭ್ಯ ಇಲ್ಲದ ಕಾರಣ ಖಾಸಗಿ ಬಸ್ಗಳು, ಆಟೋಗಳು ಹೆಚ್ಚಾಗಿದ್ದು ಸಾರ್ವಜನಿಕರಿಂದ ಮನಬಂದಂತೆ ಹಣ ಪಡೆಯುತ್ತಿದ್ದಾರೆ. ಅಲ್ಲದೆ ಒಂದೇ ಆಟೋದಲ್ಲಿ 12 ರಿಂದ 15 ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದು ಇಂತಹ ವ್ಯವಸ್ಥೆಯಿಂದ ಮಹಿಳೆಯರು, ವೃದ್ಧರು ಜೀವ ಹಿಡಿದುಕೊಂಡು ಮನೆ ಸೇರಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಈ 15 ನೂತನ ಬಸ್ಗಳ ಸೇವೆಯಿಂದ ಇಂತಹ ಸಮಸ್ಯೆಗಳು ಪಾರುಗುವುದು ಖಚಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement