ಬಂಗಾರಪೇಟೆ: ಕುವೆಂಪು ಜನ್ಮದಿನಾಚರಣೆ
ಬಂಗಾರಪೇಟೆ: ಪಟ್ಟಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚಣೆಯನ್ನು ಕಸಾಪವತಿಯಿಂದ ಆಯೋಜಿಸಲಾಗಿತ್ತು. ಕುವೆಂಪು ವೃತ್ತದಲ್ಲಿರುವ ಕುವೆಂಪು ಪ್ರತಿಮೆಗೆ ಮಾರ್ಲಾಪಣೆ ಮಾಡಿದ ಬಳಿಕ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಆರ್. ಅಶ್ವಥ್, ಕುವೆಂಪು ತಮ್ಮ ಕವಿತೆಗಳ ಮುಖಾಂತರ ಸರಳವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯವನ್ನು ಬರೆದು ಎಲ್ಲರ ಗಮನ ಸೆಳೆದಿದ್ದ ಮಹಾನ್ ವ್ಯಕ್ತಿ ಎಂದರು. ಕಸಾಪ ಹಳ್ಳಿ ಮಕ್ಕಳಿಗೆ ಕನ್ನಡ ಮತ್ತು ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಸಾಪ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕುವೆಂಪು ಬಗ್ಗೆ ಉಪನ್ಯಾಸ ನೀಡಿದರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬದರೀನಾಥ್, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ನೌಕರ ಸಂಘದ ಅಧ್ಯಕ್ಷ ಚಂದ್ರಶೇಖಗೌಡ, ಯುವ ಕವಿ ಚಾಂದ್ ಪಾಷ, ಲಕ್ಷ್ಮಯ್ಯ, ಕವಿಕಾವ್ಯ ವೇದಿಕೆ ಅಧ್ಯಕ್ಷ ರಾಮಚಂದ್ರ, ಮೈಸತೀಶ್ ಕುಮಾರ್, ಭಾರತಿ ನಂಜುಂಡಪ್ಪ, ರಾಜೇಶ್ವರಿ ಇದ್ದರು.
ಕನ್ನಡ ಸಂಘದಿಂದ: ಕನ್ನಡ ಸಂಘದ ಪದಾಧಿಕಾರಿಗಳು ಬೆಳಗ್ಗೆ ಕುವೆಂಪು ಪ್ರತಿಮೆಗೆ ಮಾರ್ಲಾಪಣೆ ಮಾಡಿ ರಾಷ್ಟಕವಿ ಕುವೆಂಪು ಅವರ ಬಗ್ಗೆ ಗುಣಗಾನ ಮಾಡಿದರು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಂಗರಾಮಯ್ಯ, ಹೇಮಂತ್ ಕುಮಾರ್, ಪ್ರಸಾದ್, ಮುರಳಿ ಇದ್ದರು.
ಮಾಲೂರು: ಕುವೆಂಪು ಜನ್ಮ ದಿನಾಚರಣೆ
ಮಾಲೂರು: ವಿಶ್ವ ಮಾನವತ್ವ ಸಾರಿದ ಪ್ರಥಮ ಕವಿ ಡಾ. ಕುವೆಂಪು ಅವರು ನುಡಿದಂತೆ ನಡೆದ ಮಹಾಚೇತನವಾಗಿದ್ದರು ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಂಮತಯ್ಯ ಹೇಳಿದರು.
ಸ್ಥಳೀಯ ಕರವೇ ಕಾರ್ಯಕರ್ತರು ಡಾ. ಕುವೆಂಪು ಅವರ 109 ನೇ ಜನ್ಮ ದಿನಾಚರಣೆ ಅಂಗವಾಗಿ ಅರಳೇರಿ ರಸ್ತೆಯ ಉದ್ಯಾನವನದಲ್ಲಿರುವ ಕುವೆಂಪು ಪುತ್ಥಳಿಗೆ ಹೂವಿನಹಾರ ಹಾಕಿ ಗೌರವ ಸಲ್ಲಿಸಿ ಮಾತನಾಡಿ, ಕುವೆಂಪು ಒಬ್ಬ ಕವಿಯಾಗದೆ ವಿಶ್ವಮಾನವರಾಗಿದ್ದು, ಪ್ರತಿಯೊಬ್ಬರು ಅನಿಷ್ಠದ ಕಟ್ಟುಪಾಡುಗಳನ್ನು ಮೀರಿ ವಿಶ್ವ ಮಾನವರಾಗಬೇಕು ಎಂದು ಆಶಿಸುತ್ತಿದ್ದರು ಎಂದರು. ಕರವೇ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಕನ್ನಡಿಗರನ್ನು ತಮ್ಮ ಸಾಹಿತ್ಯ ಮೂಲಕ ಬಡಿದೆಬ್ಬಿಸುತ್ತಿದ್ದ ಕುವೆಂಪು ಅವರ ಜೀವನ ಶೈಲಿ ಹೋರಾಟಕ್ಕೆ ಆದರ್ಶವಾಗಿದೆ ಎಂದರು. ವಾರ್ಡ್ ಸದಸ್ಯ ಲಿಂಗೇಶ್ವರಯ್ಯ, ಕಸಾಪ ಜಿಲ್ಲಾ ಗೌರವಕಾರ್ಯದರ್ಶಿ ಎ. ಅಶ್ವಥ್ ರೆಡ್ಡಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ. ಚಂದ್ರಪ್ಪ, ಜ.ಮು. ಚಂದ್ರು, ಗಾಯಕ ಗುಲ್ಜಾರ್, ವಕೀಲ ಡಿ.ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಕಲಾವಿದ ಸ್ವಾಮಿ, ದಯಾನಂದ್ ಇದ್ದರು.