ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು
ಮಾಲೂರು: ಸಮುದಾಯದ ಸಂಘಟನೆಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಯಾದವ ಸರ್ಕಾರಿ ನೌಕರರ ಸಂಘಧ ರಾಜ್ಯಾಧ್ಯಕ್ಷ ಎಮ್.ಸಿ. ಶ್ರೀನಿವಾಸಯ್ಯ ಕರೆ ನೀಡಿದರು.
ಪಟ್ಟಣದ ಪದ್ಮಾವತಿ ಸಂಕಿರಣದಲ್ಲಿ ಬಾನುವಾರ ಸ್ಥಳೀಯ ಯಾದವ ನೌಕರರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜನಾಂಗದ ಸಂಘಟನೆ ಶಿಕ್ಷಣಕ್ಕೆ ಹೆಚ್ಚು ಗಮನ ನೀಡಬೇಕು ಎಂದರು.
ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಲೂಕಿನ ಸಂಘಟನೆಯಲ್ಲಿ ಕೂರತೆ ಕಾಡುತ್ತಿದ್ದು, ಯಾರೇ ಸಮುದಾಯದ ನೇತೃತ್ವ ವಹಿಸಲಿ ಅವರಿಗೆ ಸಹಕಾರ ನೀಡುವ ಮನಸ್ಥಿತಿಗೆ ಸಮುದಾಯದ ಪ್ರಮುಖರು ಬರಬೇಕಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಸಮುದಾಯದ ಗಣ್ಯರನ್ನು ಹಾಗೂ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ನೂತನ ವರ್ಷದ ಕ್ಯಾಲೆಂಡರ್, ಡೈರಿ ಬಿಡುಗಡೆ ಮಾಡುವ ಜತೆಯಲ್ಲಿ ನೆನಪಿನ ಕಾಣಿಕೆಯಾಗಿ ಬ್ಯಾಗ್ ವಿತರಿಸಲಾಯಿತು. ತಾಲೂಕು ಯಾದವ ನೌಕರರ ಸಂಘಧ ಅಧ್ಯಕ್ಷ ನಟರಾಜ್ ಪ್ರಸ್ತಾವಿಕ ಮಾತನ್ನಾಡಿದರು. ಅಲಗೊಂಡನಹಳ್ಳಿ ಎ.ವೈ. ಗೋವಿಂದಪ್ಪ, ಚಂಗಪ್ಪ, ಕೃಷ್ಣಪ್ಪ, ಚೆನ್ನರಾಯಪ್ಪ, ಗೋಕುಲ್ ನಾರಾಯಣಸ್ವಾಮಿ, ರಘುರಾಮಯ್ಯ ಇದ್ದರು.