ಹುಲ್ಲಿನ ಮೆದೆಗೆ ಬೆಂಕಿ
ಮುಳಬಾಗಲು: ತಾಲೂಕಿನ ಬೊಮ್ಮಸಂದ್ರ ಗ್ರಾಮದ ಪಾಪೇಗೌಡ, ಮುನಿವೆಂಕಟಪ್ಪ ಎಂಬವರ 8 ಟ್ರ್ಯಾಕ್ಟರ್ ಹುಲ್ಲಿನ ಮೆದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ ಮೆದೆ ಬೆಂಕಿಗೆ ಆಹುತಿಯಾಗಿದೆ.
ವಿಷಯ ತಿಳಿದ ತಕ್ಷಣ ಮುಳಬಾಗಲುನಿಂದ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಬೆಂಕಿಯನ್ನು ತಹಬದಿಗೆ ತಂದರು.