ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಿ'

Rashmi Kasaragodu
Updated On : 31 Dec 2013, 2:11 am

ಬಂಗಾರಪೇಟೆ; ಶೋಷಿತ ಜನರ ದಾರಿ ದೀಪವಾಗಿರುವ ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸಹ ಬಾಳ್ವೆ ನಡೆಸಲು ಸಹಕಾರಿಯಾಗುತ್ತದೆ ಎಂದು ಆತ್ಮವಿಶ್ವಾಸ ವೇದಿಕೆ ರಾಜ್ಯಧ್ಯಕ್ಷ ಎಂ.ಎನ್. ಭಾರದ್ವಾಜ್ ಅಭಿಪ್ರಾಯಪಟ್ಟರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆತ್ಮವಿಶ್ವಾಸ ವೇದಿಕೆ ಆಯೋಜಿಸಿದ್ದ ಅಂಬೇಡ್ಕರ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಶೋಷಿತ ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದರು. ನಿವೃತ್ತ ಶಿಕ್ಷಕ ಪಿ. ನಾರಾಯಣಪ್ಪ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಅಕ್ಷರ ಜ್ಞಾನವನ್ನು ಹೊಂದಬೇಕು ಆಗಲೇ ಶೋಷಣೆ ತಡೆಗಟ್ಟಲು ಸಾಧ್ಯವಾಗುವುದು ಎಂದರು. ನಾರಾಯಣಪುರ ಆನಂದ್, ಕಲಾವಿದ ಚಂದ್ರಪ್ಪ, ಅಯ್ಯಪ್ಪ, ಅಯೂಬ್ ಖಾನ್, ನಯಾಜ್ ಅಹ್ಮದ್, ಆಕಾಶ್ ಇದ್ದರು.



ಕುವೆಂಪು ಬದುಕು-ಬರಹ ಉಪನ್ಯಾಸ
ಚಿಂತಾಮಣಿ: ಕುವೆಂಪು ಹೊಸಗನ್ನಡ ಸಾಹಿತ್ಯದ ಮೇರುಪರ್ವತ. ಕುವೆಂಪು ಅವರ ಪಾಲಿಗೆ ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗ ಎಂದು ಪ್ರವಚನಕಾರ ತಳಗವಾರ ಆನಂದ್ ಅಭಿಪ್ರಾಯಪಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ಕುವೆಂಪು ಬದುಕು-ಬರಹ ಉಪನ್ಯಾಸ ನೀಡಿ, ಉತ್ತಮ ಸಾಹಿತ್ಯ ಉತ್ತಮ ಬದುಕಿನ ಫಲ ರೂಪವಾಗಿರಬೇಕು ಎಂದು ಬಯಸಿದವರು ಎಂದರು. ಕಸಾಪ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್, ಕಸಾಪ ತಾಲೂಕು ಅಧ್ಯಕ್ಷ ಎ.ಎಸ್. ನಾಗರಾಜ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಸಾಹಿತಿ ಕೆ.ವಿ. ನಾಗಸುಬ್ರಮಣ್ಯಂ ಇದ್ದರು.
ವಿಚಾರ ಸಂಕಿರಣ
ಬಂಗಾರಪೇಟೆ; ಕೇಂದ್ರಿಯ ಅಂತರ್ಜಲ ಮಂಡಳಿ, ಜಲಸಂಪನ್ಮೂಲ ಮಂತ್ರಾಲಯ ಬೆಂಗಳೂರು ಇವರು ಜಲ ರಕ್ಷಣೆಯ ಕುರಿತಾದ ಜಲ ಧರಗಳ ನಿರ್ವಹಣೆ ಸಹಭಾಗಿತ್ವ ಹಾಗೂ ಸ್ಥಳೀಯ ಸಮಸ್ಯೆಗಳು ಎನ್ನುವ ವಿಚಾರ ಸಂಕಿರಣವನ್ನು ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಆಯೋಜಿಸಿದ್ದರು. ಕೇಂದ್ರಿಯ ಅಂತರ್ಜಲ ಮಂಡಳಿಯ ಕ್ಷೇತ್ರೀಯ ನಿರ್ದೇಶಕ ಡಿ. ಸುಬ್ಬಾರಾವ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಅಂತರ್ಜಲ ಕುಸಿಯುತ್ತಿದೆ. ಆದ್ದರಿಂದ ಅಂತರ್ಜಲವನ್ನು ಮರುಪೂರ್ಣ ಹೇಗೆ ಮಾಡಬೇಕೆಂಬ ಬಗ್ಗೆ ಚಿಂತಿಸಬೇಕು, ಸರ್ಕಾರಗಳು ಬರೀ ಮಾತಿನಲ್ಲೆ ಕೆರೆಗಳನ್ನು ರಕ್ಷಣೆ ಮಾಡದೆ ಕಾರ್ಯಗತ ಮಾಡದಿದ್ದರೆ ಮುಂದಿನ ದಿನಗಳು ಕಠಿಣವಾಗಲಿದೆ ಎಂದರು. ಹನಿ ನೀರನ್ನು ಸಂರಕ್ಷಣೆ ಮಾಡಬೇಕು, ಮಳೆ ಕೊಯ್ಲು ಪದ್ಧತಿಯನ್ನು ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಕಡ್ಡಾಯಗೊಳಿಸಬೇಕು ಮಳೆ ಕೊಯ್ಲು ಇಲ್ಲದಿದ್ದರೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಹೇಳಿದರು. ಕೇಂದ್ರಿಯ ಅಂತರ್ಜಲ ಮಂಡಳಿ ವಿಜ್ಞಾನಿಗಳಾದ ಡಾ.ಕೆ.ಆರ್. ಸೂರ್ಯನಾರಾಯಣ ಜಲ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು. ತಾಪಂ ಇಒ ಕೆ.ಎಸ್. ಭಟ್, ವೀಣಾ, ಚೇತನ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement