ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕವಿತಾ ಸಾವಿನ ಹೊಸ ತಿರುವು

Rashmi Kasaragodu
Updated On : 31 Dec 2013, 2:09 am

ಮುಳಬಾಗಲು: ಕಳೆದ ಎರಡು ದಿವಸಗಳ ಹಿಂದೆ ಕೋಲಾರದಲ್ಲಿ ರೈಲಿಗೆ ಸಿಕ್ಕಿ ಮೃತಪಟ್ಟ ತಾಲೂಕಿನ ಮಂಡಿಕಲ್ ಗ್ರಾಮದ ಪಾರ್ವತಮ್ಮ ಎಂಬವರ ಮಗಳು ಉಪನ್ಯಾಸಕಿ ಆರ್. ಕವಿತಾ (27) ಸಾವಿನ ಪ್ರಕರಣ ಹೊಸ ತಿರುವು ಪಡೆದಿದೆ.
ಕೋಲಾರದ ಚೆನ್ನೇಗೌಡ ನರ್ಸಿಂಗ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕವಿತಾ ಮಾರ್ಗ ಮಧ್ಯೆ ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಹಳಿಗೆ ಸಿಲುಕಿ ಮೃತಪಟ್ಟಿದ್ದರೆಂದು ಹೇಳಲಾಗಿತ್ತು. ಸೂಕ್ಷ ಸ್ವಭಾವದ ಕವಿತಾಗೆ ಮಂಡಿಕಲ್ ಗ್ರಾಮದ ನಾರಾಯಣಸ್ವಾಮಿ ಎಂಬವರ ಮಗ ಐಟಿಐ ವಿದ್ಯಾರ್ಥಿ ನಂದೀಶ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಕುರಿತು ಗ್ರಾಮದಲ್ಲಿ ಸಾಕಷ್ಟು ಬಾರಿ ಪಂಚಾಯತಿ ನಡೆಸಿ ಆತನಿಗೆ ತಾಖೀತು ಮಾಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ನಂದೀಶ್ ಹಿರಿಯರ ಬುದ್ದಿವಾದ ಲೆಕ್ಕಿಸದೇ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಕವಿತಾ ರೈಲಿಗೆ ಸಿಲುಕಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಾಯಿ ಪಾರ್ವತಮ್ಮ ಮುಳಬಾಗಲು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ನಂದೀಶ್ ಪರಾರಿಯಾಗಿದ್ದು ಆರೋಪಿಯನ್ನು ಬಂಧಿಸಲು ತಾಲೂಕಿನ ಮಹಿಳಾ ಸಂಘಟನೆಗಳು ಒತ್ತಾಯಿಸಿದೆ.


ಶಾಲಾ ಕೊಠಡಿ ಉದ್ಘಾಟನೆ
ಮುಳಬಾಗಲು; ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ಉತ್ತಮ ವಿದ್ಯಾಭ್ಯಾಸ ಮಾಡಿ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಹೆಸರು ತರಲು ತಾಪಂ ಉಪಾಧ್ಯಕ್ಷ ರಾಜಪ್ಪ ಹೇಳಿದರು. ತಾಲೂಕಿನ  ಕುರುಡುಮಲೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳನ್ನು ಉದ್ಫಾಟಿಸಿ ಮಾತನಾಡಿದರು. ಕಲಿಕೋತ್ಸವದಲ್ಲಿ 10 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರಾಪಂ ಅಧ್ಯಕ್ಷೆ  ಚಂದ್ರಮ್ಮಶಂಕರಪ್ಪ, ಕೆ. ಮುನೆಪ್ಪ, ನಾರಾಯಣಮ್ಮ, ಸಿದ್ದಘಟ್ಟ ಮುನಿಶಾಮಿಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement