ಕುವೆಂಪು ಉದ್ಯಾನವನ, ಗ್ರಂಥಾಲಯ ನವೀಕರಣಕ್ಕೆ ಕ್ರಮ: ಶಾಸಕ
ಮಾಲೂರು: ಪುರಸಭೆ ನಿರ್ಲಕ್ಷ್ಯ ಪಾಳು ಬಿದ್ದ ಗ್ರಂಥಾಲಯ ಎಂಬ ವರದಿ ಕನ್ನಡಪ್ರಭದಲ್ಲಿ ಸೋಮವಾರ ಪ್ರಕಟವಾದ ವರದಿಗೆ ಶಾಸಕ ಕೆ.ಎಸ್. ಮಂಜುನಾಥ್ ಸ್ಪಂದಿಸಿದ್ದು, ಈ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಪುರಸಭೆಯಲ್ಲಿ ಆಯೋಜಿಸಲಾಗಿದ್ದ ಪುರಸಭೆ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯ ನಂತರ ಮುಖ್ಯಾಧಿಕಾರಿ ಕಚೇರಿಯಲ್ಲಿ ಕನ್ನಡಪ್ರಭದ ವರದಿಯನ್ನು ಓದಿದ್ದ ನಂತರ ಪತ್ರಕರ್ತರೂಡನೆ ಮಾತನಾಡುತ್ತ ಪಟ್ಟಣದ ಅರಳೇರಿ ರಸ್ತೆಯಲ್ಲಿರುನ ಕುವೆಂಪು ಉದ್ಯಾನವನ ಹಾಗೂ ಗ್ರಂಥಾಲಯವನ್ನು ಖಾಸಗಿ ಕಾರ್ಖಾನೆಯ ಸುರ್ಪದಿಗೆ ನೀಡಿ ಸಾರ್ವಜನಿಕರ ಉಪಯೋಗಕ್ಕಾಗಿ ಬರುವಂತೆ ನವೀಕರಿಸಲಾಗುವುದು ಎಂದು ತಿಳಿಸಿರುವ ಶಾಸಕ ಮಂಜುನಾಥ್ ರವರು ವಾಕ್ ಮಾಡುವವರಿಗೆ ಅನುಕೂಲವಾಗುವಂತಹ ಪಾರ್ಕ್ ನಿರ್ಮಿಸುವುದಾಗಿ ತಿಳಿಸಿದ್ದಾರೆ.