ಚರ್ಚಾ ಸ್ಪರ್ಧೆ ವಿಜೇತರಿಗೆ ಪಾರಿತೋಷಕ
ಮುಳಬಾಗಲು: ವಿದ್ಯಾರ್ಥಿಗಳು ಪ್ರಾಚೀನ ಸಂಸ್ಕೃತಿ ಸಂರಕ್ಷಿಸಲು ಪಣ ತೊಡಗಬೇಕು ಎಂದು ಮನೋಹರಸಾಯಿ ಆಸ್ಪತ್ರೆ ನಿರ್ದೇಶಕ ಡಾ. ದೊಡ್ಡಡಭದ್ರೇಗೌಡ ಹೇಳಿದರು.
ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಮೊಬೈಲ್ ಬಳಕೆ ಉಪಯೋಗವೇ ಮಾರಕವೇ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಿ ಮಾತನಾಡಿ, ಸಮಾಜ ಸೇವಕ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ.ಸಿ.ಕೆ. ಹಿರಣ್ಯಗೌಡ ಅವರ ಸಹೋದರ ಸಿ.ಕೆ. ರಾಧವಲ್ಲಭಗೌಡ ಮಾತನಾಡಿ, ವಿದೇಶದಲ್ಲಿ ವಾಸವಾಗಿರುವ ತಮ್ಮ ಸಹೋದರ ದೇಶಿಯ ಯೋಗ,ಧ್ಯಾನದ ಬಗ್ಗೆ ಅಮೆರಿಕಾದಲ್ಲಿ ಭಾರತೀಯರನ್ನು ಒಗ್ಗೂಡಿಸಿ ಸಮಾಜ ಸೇವೆ ಆರಂಭಿಸಿದರು ಎಂದರು.
ಅಲ್ಲಿಂದಲೇ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ದೇವಾಲಯಗಳ ಅಭಿವೃದ್ಧಿಗೆ ಧನಸಹಾಯ ಮಾಡುತ್ತಿದ್ದಾರೆಂದರು.