ಜ.4 ರಂದು ಮಾನವ ಹಕ್ಕುಗಳ ಜಾಗೃತಿ ಸಮಾವೇಶ
ಗುಡಿಬಂಡೆ: ತಾಲೂಕಿನ ತಿರುಮಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜ.4ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಹಾಗೂ ಬೆಂಗಳೂರಿನ ವಿಜಯ ನಗರ ಲಯನ್ಸ್ ಕ್ಲ್ಲಬ್ ಸಹಯೋಗದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಾವೇಶ ಹಾಗೂ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಸಿ.ಜಿ. ಹುನಗುಂದ್ ಈ ಉದ್ಘಾಟಿಸಿಲಿದ್ದಾರೆ. ವಿಜಯನಗರ ಲಯನ್ಸ್ ಕ್ಲ್ಲಬ್ ಅಧ್ಯಕ್ಷ ಎಂ. ಕೃಷ್ಣದಾಸ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್ಪಿ ಎನ್. ಶಿವಪ್ರಸಾದ್, ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಕೃಷ್ಣಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. ತಿರುಮಣಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿಗಳನ್ನು ವಿತರಿಸಲಾಗುವುದು ಹಾಗೂ ಲೋಕಾಯುಕ್ತ ಅಧೀಕ್ಷಕ ಎಂ. ಕೃಷ್ಣಪ್ಪರಿಗೆ ಉನ್ನತಿ ರಾಜ್ಯ ಪೊಲೀಸ್ ಸೇವಾ ಶ್ರೀ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಜಿ.ವಿ. ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಪ್ರತಿಯೊಬ್ಬರೂ ಸ್ವಾವಲಂಬಿಯಾಗಲಿ'
ಶಿಡ್ಲಘಟ್ಟ: ಸಮಾಜದ ಪ್ರತಿಯೊಬ್ಬ ವ್ಯಕ್ತಿ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ರಾಜಣ್ಣ ಹೇಳಿದರು. 2013-14ನೆ ಸಾಲಿನ ಪರಿಶಿಷ್ಟ ಜಾತಿಯ ರೇಷ್ಮೆ ನೊಲು ಬಿಚ್ಚಣಿಕೆದಾರರ ಪ್ರೊತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
2013-14ನೇ ಸಾಲಿನ ಪರಿಶಿಷ್ಟ ಜಾತಿಯ ರೇಷ್ಮೆ ನೊಲು ಬಿಚ್ಚಣಿಕೆದಾರರಿಗೆ 105 ಜನರಿಗೆ 18ಲಕ್ಷ 64ಸಾವಿರ ಪ್ರೋತ್ಸಾಹ ಧನ ಸರ್ಕಾರದಿಂದ ಬಂದಿದ್ದು, ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಬಡವರು, ಕೊಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರು ಮುಂದೆ ಬರಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ರೇಷ್ಮೆ ಉಪರ್ದೇಶಕ ನರಸಿಂಹ ಮೂರ್ತಿ, ರೀಲರ್ಸ್ ಅಸೋಸಿಯೇಟ್ಸ್ ಅದ್ಯಕ್ಷ ಅಕ್ಮಲ್ಪಾಷ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅದ್ಯಕ್ಷ ಬಂಕ್ ಮುನಿಯಪ್ಪ, ರೀಲರ್ಸ್ ಅಸೋಸಿಯೇಟ್ನ ಗೌರವಾದ್ಯಕ್ಷರು ರಹಮತ್ತುಲ್ಲಾ ಮತ್ತಿತರರು ಇದ್ದರು.