ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನಸಾಮಾನ್ಯರಲ್ಲಿ ಮನೆ ಮಾತಾಗಿರುವ ಚುಟುಕು ಸಾಹಿತ್ಯ

Rashmi Kasaragodu
Updated On : 31 Dec 2013, 2:11 am

ಕ.ಪ್ರ.ವಾರ್ತೆ    ಕೋಲಾರ    ಡಿ.30
ಚುಟುಕು ಸಾಹಿತ್ಯ ಸಮಾಜದ ಕನ್ನಡಿಯಾಗಿದೆ, ನಮ್ಮ ಸುತ್ತ ಮುತ್ತಲ ಪ್ರತಿದಿನದ ಸಂಗತಿಗಳನ್ನು ಬಿಂಬಿಸುವ ಮೂಲಕ ಹಾಸ್ಯದ ಜತೆಗೆ ಮನಸ್ಸುಗಳನ್ನು ಜಾಗೃತಗೊಳಿಸುತ್ತಿರುವ ಅಸ್ತ್ರವಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ತಿಳಿಸಿದರು.
ನಗರದ ಟಮಕದಲ್ಲಿನ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ನಮನ ಹಾಗೂ ಚುಟುಕುಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊನಚಾದ ಹಾಸ್ಯ ಹಾಗೂ ವಿಡಂಬನೆಯ ಮೂಲಕ ಚುಟುಕು ಸಾಹಿತ್ಯ ಜನ ಸಾಮಾನ್ಯರಲ್ಲಿ ಮನೆ ಮಾತಾಗಿದೆ ಎಂದು ಅಭಿಪ್ರಾಯಪಟ್ಟರು. 12ನೇ ಶತಮಾನದಲ್ಲಿ ರಚಿತವಾದ ಚುಟುಕುಗಳು ಇಂದಿಗೂ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಮಾನವನ ಅಂಗಾಂಗಳ ಹೊಂದಾಣಿಕೆಯಂತೆ ಮನುಷ್ಯನ ರುಚಿಗೆ ಕನ್ನಡ ಸಾಹಿತ್ಯಕ್ಕೆ ಚುಟುಕು ಸಾಹಿತ್ಯ ಪೂರವಾಗಿದೆ ಎಂದರು.
ಕುವೆಂಪು ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದ ಜಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜಜ್ಮಾತನಾಡಿ ಯಾವ ದೇಶವಾದರೂ, ಭಾಷೆ ಯಾವುದಾದರೂ ಕನ್ನಡ ಕಲಿಯಬೇಕು ಕಲಿಸುವಂತಾಗಬೇಕು, ತಾಯಿ ಹೇಗೋ ಕನ್ನಡ ಭಾಷೆಯೂ ಹಾಗೆಯೇ ಇದ್ದು, ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಶ್ರೀ ದೇವರಾಜು ಅರಸು ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಬಿ. ಸಾಣಿಕೊಪ್ಪ ಮಾತನಾಡಿ, ಕನ್ನಡ ಭಾಷೆಯ ಕಲಿಕೆಯು ವಿದ್ಯಾಲಯದಲ್ಲಿದ್ದು, ರೋಗಿ ಮತ್ತು ವೈದ್ಯನ ಸಂಪರ್ಕದಲ್ಲಿ ಕನ್ನಡ ಅಗ್ರಗಣ್ಯ ಸ್ಥಾನ ವಹಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ, ವೈದ್ಯಕೀಯ ಲೋಕದಲ್ಲೂ ಸಾಹಿತ್ಯಾಸಕ್ತರು ಇದ್ದು, ಸಾಹಿತ್ಯ ಪ್ರೇಮಿಗಳಾಗಬೇಕು. ಚುಟುಕುಗಳ ರಚಿಸಿ ಪುಸ್ತಕ ರೂಪ ನೀಡುವುದರಿಂದ ಮನಸ್ಸಿಗೆ ಮುದ ಸಿಗುತ್ತದೆಂದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ. ಉಮಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಶ್ವತ್ಥರೆಡ್ಡಿ ಇದ್ದರು.
ವಿ.ಪಿ. ಸೋಮಶೇಖರ್, ಪೋಸ್ಟ್ ನಾರಾಯಣಸ್ವಾಮಿ, ಸೀಕಲ್ ನರಸಿಂಹಪ್ಪ, ಡ್ಯಾನಿಡ್ ಕೃಷ್ಣಮೂರ್ತಿ, ಹಣಬೆ ಪಾಪೇಗೌಡ, ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ, ಚುಟುಕು ವಚನ ಮಾಡಿದರು.
ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ತಂಡದಿಂದ ಜನಪದ ಕುವೆಂಪು ಗೀತಗಾಯನ ಮೂಲಕ ಹಾಡಿ ರಂಜಿಸಿದರೆ, ಚೌಡಮ್ಮ ತಂಡದಿಂದ ಕೋಲಾಟ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement