ಶಾರ್ಟ್ಸರ್ಕ್ಯೂಟ್: ಹಾಲು ಡೇರಿಯಲ್ಲಿ ಕೆಲಸಗಾರ ಸಾವು
ಕೆಜಿಎಫ್: ಪಾರಂಡಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್ ಸಂಭವಿಸಿ ಹಾಲು ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರಂಡಹಳ್ಳಿ ಗ್ರಾಮದ ವೆಂಕಟರಾಮರೆಡ್ಡಿ(37) ಎಂಬುವರು ಸಹಕಾರ ಒಕ್ಕೂಟದ ಸಂಘದಲ್ಲಿ ಸುಮಾರು 10 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹಾಲಿನ ಡೈರಿಯಲ್ಲಿ ಹಾಲಿನ ಟ್ಯಾಂಕ್ನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೊಂಡು ತೀರಾ ಅಸ್ವಸ್ಥಗೊಂಡಿದ್ದ ವೆಂಕಟರಾಮರೆಡ್ಡಿ ಅವರನ್ನು ಗ್ರಾಮಸ್ಥರು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು, ಕೋಮುಲ್ ಡಿಎಂಒ ಅಧಿಕಾರಿಗಳು ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.