ದ್ವಿಪಥ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ
ಬಂಗಾರಪೇಟೆ: ಎಸ್.ಎನ್. ರೆಸಾರ್ಟ್ನಿಂದ ದೇಶಿಹಳ್ಳಿವರೆಗೂ ದ್ವಿಪಥ ರಸ್ತೆ ನಿರ್ಮಾಣಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಜಯಚಂದ್ರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡಿ ದ್ವಿಪತ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ಪಟ್ಟಣದ ನಾಗರಿಕರ ಬಹುದಿನಗಳ ಕನಸಾಗಿದ್ದ ದ್ವಿಪಥ ರಸ್ತೆ ನಿರ್ಮಾಣ ಈಡೇರುತ್ತಿರುವುದು ಸಂತಸ ತಂದಿದೆ. ಎಸ್.ಎನ್. ರೆಸಾರ್ಟ್ನಿಂದ ದೇಶಿಹಳ್ಳಿವರೆಗೂ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿತ್ತು. ಅಲ್ಲದೆ ಈ ರಸ್ತೆಯಲ್ಲಿ ಶಾಲಾ ಮಕ್ಕಳು, ವೃದ್ಧರು ರಸ್ತೆ ದಾಟಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ವಾಹನಗಳ ದಟ್ಟಣೆಯಿತ್ತ.ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶಾಸಕರಾದ ಬಳಿಕ ಪ್ರಥಮವಾಗಿ ಈ ರಸ್ತೆಯನ್ನು ಅಗಲಿಕರಣ ಮಾಡಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಥಿಕಾರದ ಅಧಿಕಾರಿಗಳು ಪಟ್ಟಣಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಎರಡು ತಿಂಗಳಲ್ಲಿ ಟೆಂಡರ್ ಕರೆದು ಗುತ್ತಿಗೆ ನೀಡಿ ಒಂದು ವರ್ಷದಲ್ಲಿ ಡಬಲ್ ರಸ್ತೆ ಸಾರ್ವಜನಿಕರಿಗೆ ಅರ್ಪಿಸುವುದಾಗಿ ಅಧಿಕಾರಿ ಜಯಚಂದ್ರ ತಿಳಿಸಿದರು. ಚುನಾವಣೆ ಗಿಮಿಕ್ ಆಗದೆ ರಸ್ತೆ ಪೂರ್ಣವಾಗಲಿ ಎಂಬುದು ನಾಗರಿಕರ ಆಸೆಯಾಗಿದೆ.