ಬಿಗಿ ಬಂದೋಬಸ್ತ್ನಲ್ಲಿ ಮಾರ್ವೇ ಮೀನುಗಳ ಕುಂಟೆ ನಾಶ
ಚಿಂತಾಮಣಿ: ಮಾರ್ವೆ (ಆಫ್ರಿಕನ್ ಕ್ಯಾಟ್ಶ್) ಮೀನುಗಳನ್ನು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನಿಷೇಧಿಸಿದ್ದರು ಹಲವರು ಸಾಕುತ್ತಿದ್ದು, ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ನೇತೃತ್ವದಲ್ಲಿ ಮೀನಿನ ಕುಂಟೆಗಳನ್ನು ನಾಶಪಡಿಸಲಾಯಿತು.
ತಾಲೂಕಿನ ಚಿನ್ನಸಂದ್ರ ವ್ಯಾಪ್ತಿಯಲ್ಲಿ ಮಾರ್ವೇ ಮೀನಿನ ಸಾಕಾಣಿಕೆ ಮಾಡುತ್ತಿದ್ದು, ಅಧಿಕಾರಿಗಳ ಕಾರ್ಯಾಚರಣೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಡಿವೈಎಸ್ಪಿ ಸಣ್ಣತಿಮ್ಮಪ್ಪ ತಾಲೂಕಿನ ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ, ಗ್ರಾಮಾಂತರ, ದಿಬ್ಬೂರಹಳ್ಳಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಿಂದ ಸುಮಾರು 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕರೆಸಿ ಮೀನಿನ ಕುಂಟೆಗಳನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮ ಮಾಡಲಾಯಿತು.
ಚಿನ್ನಸಂದ್ರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ 24 ಗಂಟೆ ನಿಷೇಧಾಜ್ಞಗೆ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಆದೇಶಿಸಿದ್ದರು. ಯಾವುದೇ ಅಡ್ಡಿ ಇಲ್ಲದೆ ಸುಮಾರು 30 ಮಾರ್ವೇ ಮೀನಿನ ಮರಿಗಳ ಕುಂಟೆಗಳನ್ನು ನೆಲಸಮ ಮಾಡಲಾಯಿತು. ಕಾರ್ಯಾಚರಣೆಯಲ್ಲಿ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ, ಡಿವೈಎಸ್ಪಿ ಸಣ್ಣತಿಮ್ಮಪ್ಪ, ವೃತ್ತ ನಿರೀಕ್ಷಕ ನಂಜಪ್ಪ, ವೆಂಕಟೇಶಮೂರ್ತಿ, ಸಬ್ಇನ್ಸ್ಪೆಕ್ಟರ್ಗಳಾದ ರಾಘವೇಂದ್ರ,ಅನಿಲ್ಕುಮಾರ್, ರಾಜಣ್ಣ, ಪ್ರವೀಣ್ಕುಮಾರ್, ತಬರೇಜ್ ಆಲಂಪಾಷ ಇದ್ದರು.