ಯೋಧರಿಗೆ ನಮನ ಕಾರ್ಯಕ್ರಮ
ಚಿಂತಾಮಣಿ: ದೇಶದ ಗಡಿಯಲ್ಲಿ ಯೋಧರು ಆತ್ಮ ಸ್ಥೈರ್ಯದಿಂದ ರಕ್ಷಣೆ ಮಾಡಿದರೆ ಮಾತ್ರ ನಾವು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು. ನಗರದ ಕೆಎಂಟಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವಮೋರ್ಚಾದಿಂದ ಯೋಧರಿಗೆ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಿವೃತ್ತ ಯೋಧರನ್ನು ಹಾಗೂ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು. ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪಿ. ಮುನಿರಾಜು, ಪ್ರಧಾನಕಾರ್ಯದರ್ಶಿ ಎಸ್.ವಿ. ರಾಜೇಂದ್ರ, ಜಿಲ್ಲಾಧ್ಯಕ್ಷ ಮಿಟ್ಟಹಳ್ಳಿ ಮಂಜು, ಮಹಿಳಾ ಯುವಮೋರ್ಚಾ ಕಾರ್ಯದರ್ಶಿ ಭಾರತಿ,ಅಟ್ಟೂರು ಮಂಜುನಾಥ್ ಇದ್ದರು.
ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ
ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಸಂಭವಿಸುವ ಅನಾಹುತಗಳನ್ನು ನಿರ್ಭಯವಾಗಿ ಎದುರಿಸಿ ಹೆಚ್ಚಿನ ನಷ್ಟ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ಜಾಗೃತಿ ಮೂಡಿಸಲು ನಗರದ ಹೊರವಲಯದ ಸಿವಿವಿ ಕ್ಯಾಂಪಸ್ನಲ್ಲಿ ಜಿಲ್ಲಾ ಗೃಹ ರಕ್ಷಕದ ದಳದ ವತಿಯಿಂದ ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಗ್ನಿಶಾಮಕ ದಳ ಸಿಬ್ಬಂದಿ ವಿಪತ್ತುಗಳು ಸಂಭವಿಸಿದಾಗ ಅನುಸರಿಬೇಕಾದ ನಿಯಮಗಳ ಕುರಿತು ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ವಿ. ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿದರು.
ಜಿಲ್ಲಾ ಗೃಹ ರಕ್ಷಕದಳ ಸಮಾದೇಷ್ಠ ಆರ್. ವೆಂಕಟೇಶ್ ಮಾತನಾಡಿದರು. ಡಾ.ಕೆ.ಎನ್. ಕವನ ಮಾತನಾಡಿದರು. ಪ್ರಾಂಶುಪಾಲ ಜಿ. ನರಸಿಂಹಯ್ಯ, ಅಂಭುಜಾಕ್ಷಿ, ಅಗ್ನಿಶಾಮಕ ಅಧಿಕಾರಿ ಎಸ್.ಡಿ. ಆಶೋಕ್ ಬಾಬು ಇದ್ದರು.
ಚಿನ್ನಾಭರಣ ಕಳವು
ಕೆಜಿಎಫ್: ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆ, ಹಿತ್ತಾಳೆ ಸಾಮಾನು ಹಾಗೂ ಎಟಿಎಂ ಕಾರ್ಡ್ನ್ನು ಕಳವು ಮಾಡಿರುವ ಘಟನೆ ಆಂಡ್ರಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಡ್ರಸನ್ಪೇಟೆಯ ಮಸ್ಕಂ ಬಡಾವಣೆಯ ನಿವಾಸಿ ಗೀತಾಲಕ್ಷ್ಮಿ ಎಂಬವರ ಮನೆಯ ಹಿಂಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಸುಮಾರು 63 ಸಾವಿರ ಬೆಲೆ ಬಾಳುವ ಚಿನ್ನದ ಒಡವೆ, ಅಡುಗೆ ಮನೆಯಲ್ಲಿ ಉಪಯೋಗಿಸುವ ಹಿತ್ತಾಳೆ ಸಾಮಾನುಗಳು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಟಿಎಂ ಕಾರ್ಡ್ನ್ನು ಕಳವು ಮಾಡಿದ್ದಾರೆ ಎಂದು ಗೀತಾಲಕ್ಷ್ಮೀಆಂಡ್ರಸನ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.