ರು. 7 ಲಕ್ಷಕ್ಕೆ ಮರಳು ಹರಾಜು
ಮುಳಬಾಗಲು: ತಾಲೂಕು ಪ್ರವಾಸಿ ಮಂದಿರದ ಅವರಣದಲ್ಲಿ 99 ಅಕ್ರಮ ಮರಳು ಲಾರಿಗಳಿಂದ ಸಂಗ್ರಹಿಸಿದ್ದ ಮರಳು ಮಂಗಳವಾರ ಏರ್ಪಡಿಸಿದ್ದ ಹರಾಜು ಪ್ರಕ್ರಿಯೆಯಲ್ಲಿ 7 ಲಕ್ಷ ರು.ಗಳಿಗೆ ಬಿಕರಿಯಾಗಿದೆ. ಕಳೆದ ತಿಂಗಳು 6 ಲಕ್ಷರು.ಗಳಿಗೆ ಹರಾಜಾಗಿದ್ದು ಕಡಿಮೆ ಎಂದು ಪರಿಗಣಿಸಿದ ಕೋಲಾರ ಜಿಲ್ಲಾ ಧಿಕಾರಿ ಡಿ.ಕೆ. ರವಿ ಮರು ಹರಾಜಿಗೆ ಆದೇಶಿಸಿದ್ದರು. ಮುನಿಆಂಜಪ್ಪರ ಸೂಚನೆಯಂತೆ ಎಇಇ ಮುಷೀರ್ ಅಹಮದ್, ಹಿರಿಯ ಅಭಯಂತರ ಸಂತೋಷ್, ಕಚೇರಿ ವ್ಯವಸ್ಥಾಪಕ ಮಂಜುನಾಥ್ ಹರಾಜ ಪ್ರಕ್ರಿಯೆ ನಡೆಸಿದರು.