ವಿದ್ಯೆ ಪಡೆದು ನೆಮ್ಮದಿ ಜೀವನ ನಡೆಸಿ
ಮಧುಗಿರಿ: ವಿದ್ಯೆ ಪಡೆದು ಸಮಾಜದಲ್ಲಿ ಗೌರವದಿಂದ ನೆಮ್ಮದಿ ಜೀವನ ನಡೆಸಲು ಮುಂದಾಗಬೇಕು ಎಂದು ಡಿಡಿಪಿಐ ಟಿ.ಎಸ್.ಆಂಜನಪ್ಪ ಕರೆ ನೀಡಿದರು. ಇಲ್ಲಿನ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಚೇತನ ಆಂಗ್ಲ ಶಾಲೆ ಏರ್ಪಡಿಸಿದ್ದ ಚೇತನ ಕಲ್ಚರಲ್ ಫೆಸ್ಟ್ 2013ರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಸಂಪದ್ಭರಿತ ಸಾಂಸ್ಕೃತಿಕ ಯೋಗ ಭೂಮಿ, ಪಾಶ್ಚಿಮಾತ್ಯ ಭೋಗ ಭೂಮಿಯ ಕರಿ ನೆರಳು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ನಾಶ ಮಾಡಲು ಹವಣಿಸುತ್ತಿದೆ ಎಂದರು.
ಪೋಷಕರು ಇಂಗ್ಲಿಷ್ ವ್ಯಾಮಹೋಕ್ಕೆ ಒಳಗಾಗಿ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ಕಲಿಸುವುದು ನಶಿಸಿ ಹೋಗುತ್ತಿದೆ. ದೀಪ ಹಚ್ಚುವ ಸಂಸ್ಕೃತಿ ನಮ್ಮದು ಎಂದರು. ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ ಮಧುಗಿರಿ ಶೈಕ್ಷಣಿಕ ಜಿಲ್ಲೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಮುಂದೂ ಕೂಡ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಲಿ ಎಂದರು.