ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಆಶ್ರಯ'ಕ್ಕೆ ಹೆಚ್ಚುವರಿ ಹಣ ವಸೂಲಿ: ಪ್ರತಿಭಟನೆ

Parashurama
Updated On : 1 Feb 2013, 10:57 am

ಮಾಲೂರು: 9 ವರ್ಷದಿಂದ ಪಟ್ಟಣದ ಆಶ್ರಯ ಫಲಾನುಭವಿಗಳಿಗೆ ನಿವೇಶನ ನೀಡದೆ ಮತ್ತೆ ನಿವೇಶನ ನೀಡುವುದಾಗಿ ನಂಬಿಸಿ ಅವರಿಂದಲ್ಲೇ 35000 ಹೆಚ್ಚಾಗಿ ಪಡೆದಿರುವುದನ್ನು ಖಂಡಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಇ. ರಾಮೇಗೌಡ ನೇತೃತ್ವದಲ್ಲಿ ಬೆಂಬಲಿಗರು ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭ ರಾಮೇಗೌಡ ಮಾತನಾಡಿ, 2004 ರಲ್ಲಿ 5000 ಕಟ್ಟಿಸಿಕೊಂಡು ಬಡವರಿಗೆ ನಿವೇಶನ ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಪುರಸಭೆಯು ಇದುವರೆಗೂ ನಿವೇಶನ ನೀಡಿಲ್ಲ. ಮತ್ತೆ ಫಲಾನುಭವಿಗಳಿಂದ 35000 ಹೆಚ್ಚುವರಿಯಾಗಿ ಪಡೆದಿದೆ ಎಂದು ಆರೋಪಿಸಿದರು.
ಈಗ ಕೋರ್ಟ್ ಮೆಟ್ಟಿಲು ಹತ್ತಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಡವರ ಕಟ್ಟಿರುವ 35000 ಹೆಚ್ಚುವರಿ ಹಣವನ್ನು ತಕ್ಷಣ ವಾಪಸ್ ಮಾಡಬೇಕು. ಬಡವರ ಆಶ್ರಯ ಯೋಜನೆಗಾಗಿ ಇದ್ದ ಜಮೀನಿನಲ್ಲಿ 2.5 ಎಕರೆಯನ್ನು ಸರ್ಕಾರಿ ಕಾಲೇಜಿಗೆ ನೀಡಿರುವ ಶಾಸಕರು ಬಡವರ ಬದುಕಿನ ಜೊತೆಯಲ್ಲಿ ಆಟವಾಡುತ್ತಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ದಲ್ಲಿ ಆಶ್ರಯ ಯೋಜನೆಯ ಜಮೀನಿನ ಪಕ್ಕದಲ್ಲಿರುವ ಶಾಸಕರ ಸ್ವಂತ ಜಮೀನನ್ನು ಆಶ್ರಯ ಯೋಜನೆಗೆ ನೀಡಲಿ ಎಂದು ಸವಾಲ್ ಹಾಕಿದರು.
ಒಂದು ವೇಳೆ ತಮ್ಮ ಆಡಳಿತಾವಧಿಯಲ್ಲಿ ಶಾಸಕರು ಬಡವರಿಗೆ ನಿವೇಶನ ಹಂಚಲು ವಿಫಲರಾದರೆ ಮುಂಬರಲಿರುವ ಚುನಾವಣೆಯಲ್ಲಿ ಪಟ್ಟಣದ ಜನತೆ ಆಶೀರ್ವದಿಸಿದಲ್ಲಿ ಬಡವರು ಕಟ್ಟಿದ್ದ 35000 ವಾಪ್ಪಾಸ್ಸು ನೀಡುವ ಜೊತೆಯಲ್ಲಿ ಹಿಂದೆ ಕಟ್ಟಿರುವ 5000 ಗಳಿಗೆ 1125 ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಘೋಷಿಸಿದರು.
ಮುಂದಿನ 10 ದಿನದೂಳಗೆ ಪುರಸಭೆ ಕೋರ್ಟ್‌ನಲ್ಲಿ ಸಮರ್ಥ ವಕೀಲರ ಮೂಲಕ ತಡೆಯಾಜ್ಞೆ ತೆರವುಗೊಳಿಸಿ ನಿವೇಶನ ಹಂಚದಿದ್ದರೆ ಎಲ್ಲ ಫಲಾನುಭವಿಗಳ ಜೊತೆಯಲ್ಲಿ ಪುರಸಭೆ ಅವರಣದಲ್ಲೇ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ರುದ್ರಮುನಿ, ಕಂದಾಯ ಅಧಿಕಾರಿ ಸುಬ್ರಮಣಿ, ದಿನೇಶ್ ಗೌಡ, ಟಸ್ಕರ್ ಬಾಬು,ಪಾಪಣ್ಣ, ಶೀನಪ್ಪ, ಜೆ.ಎಂ. ಸುರೇಶ್ ಕುಮಾರ್, ಸಂದೀಪ್, ಬಾಲೂ, ಭರತ್, ಶಶಾಂಕ್, ದಾಕ್ಷಯಿಣಿ, ಸುಜಾತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments