ಶ್ರೀನಿವಾಸಗೌಡರಿಂದ ಸೋಲಾರ್ ದೀಪ ಕೊಡುಗೆ
ಕೋಲಾರ: ತಾಲೂಕಿನ ನರಸಾಪುರ ಗ್ರಾಮದ ಎ ಬ್ಲಾಕ್‌ನ ರಸ್ತೆಗೆ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಇಫ್ಕೋ ಸಂಸ್ಥೆಯ 23 ಸಾವಿರ ಬೆಲೆಯ ಸೋಲಾರ್ ದೀಪವನ್ನು ಕೊಡುಗೆಯಾಗಿ ನೀಡಿದರು.
ಗುರುವಾರ ಸಂಜೆ ಸೋಲಾರ ದೀಪಕ್ಕೆ ಚಾಲನೆ ನೀಡಿದ ಶ್ರೀನಿವಾಸಗೌಡರು, ಕಳೆದ 6 ತಿಂಗಳ ಹಿಂದೆ ಈ ರಸ್ತೆಯಲ್ಲಿ ಚಿರತೆಯೊಂದು ನುಗ್ಗಿ 16 ಕುರಿಗಳನ್ನು ಕೊಂದು ಹಾಕಿದ್ದು, ಇಲ್ಲಿನ ನಾಗರೀರ ಕೋರಿಕೆ ಮೇರೆಗೆ ಸೋಲಾರ್ ದೀಪ ಕೊಡುಗೆ ನೀಡಿರುವುದಾಗಿ ತಿಳಿಸಿದರು.
ನಾಗರಿಕರು ಅಪೇಕ್ಷಿಸಿದರೆ ಅಗತ್ಯವಿರುವ ಕಡೆಗಳಲ್ಲೆಲ್ಲಾ ಸೋಲಾರ್ ದೀಪ ಅಳವಡಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಆಂಜನಮ್ಮ, ಮುಖಂಡರಾದ ಎಂಟಿಬಿ ಶ್ರೀನಿವಾಸ್, ಮುನಿಶಾಮಪ್ಪ, ಮಲ್ಲಪ್ಪ, ಪ್ರಾಣೇಶ್ವರರಾವ್, ಸಮಾಜ ಸೇವಕಿ ಸರಸ್ವತಿ, ಎಪಿಎಂಸಿ ಅಧ್ಯಕ್ಷ ಈರಣ್ಣ, ನಿರ್ದೇಶಕರಾದ ಗೋಪಾಲ್, ಬಣಕನಹಳ್ಳಿ ನಟರಾಜ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.