ಬ್ಯಾಗಿನಲ್ಲಿಟ್ಟ ಒಡವೆ ಕಳವು: ದೂರು
ಬಂಗಾರಪೇಟೆ: ಮನೆಯಲ್ಲಿ ಬ್ಯಾಗಿನಲ್ಲಿಟ್ಟಿದ್ದ 65 ಸಾವಿರ ಮೌಲ್ಯದ ಚಿನ್ನದ ಒಡವೆಗಳನ್ನು ದುಷ್ಕರ್ಮಿಗಳು ಹಗಲಲ್ಲೆ ಲಪಟಾಯಿಸಿಕೊಂಡು ಹೋಗಿರುವ ಪ್ರಕರಣ ಪಟ್ಟಣದ ವಿವೇಕಾನಂದನಗರದಲ್ಲಿ ನಡೆದಿದೆ.
ಪಟ್ಟಣದ ವಿವೇಕಾನಂದನಗರ ಬಡಾವಣೆ ನಿವಾಸಿ ರೋಹಿಣಿ ಆರ್. ಹಿರೇಮಠ್ ಅವರು ಬಿಜಾಪುರಕ್ಕೆ ಹೋಗುವ ಸಲುವಾಗಿ 6ಸಾವಿರ ಬೆಲೆ ಬಾಳುವ 20ಗ್ರಾಮ ತೂಕದ ನೆಕ್ಲೆಸ್ ಮತ್ತು 3 ಗ್ರಾಮದ ತೂಕದ ಓಲೆಗಳನ್ನು ಒಂದು ಡಬ್ಬಿಯಲ್ಲಿ ಇಟ್ಟು ಅದನ್ನು ಬ್ಯಾಕಿನಲ್ಲಿ ಇಟ್ಟುಕೊಂಡು ಟಿವಿ ಬಳಿ ಇಟ್ಟಿದ್ದರು. ಆ ವೇಳೆ ರೋಹಿಣಿ ಅವರ ಮನೆ ಬಳಿಯಿರುವ ಪರಿಚಿತೆ ಸೌಂದರ್ಯ ಎಂಬುವರು ಮನೆಗೆ ಬಂದು ಮಗುವಿಗೆ ಊಟ ತಿನ್ನಿಸುತ್ತಿದ್ದರು. ಈ ವೇಳೆಯಲ್ಲಿ ರೋಹಿಣಿ ರವರು ಅಡುಗೆ ಮನೆಯಲ್ಲಿ ಅಡುಗೆ ಕೆಲಸದಲ್ಲಿ ತಲ್ಲೀನರಾಗಿದ್ದರು. ನಂತರ ಬಂದು ನೋಡುವಷ್ಟರಲ್ಲಿ ಸೌಂದರ್ಯ ಸಹ ಹೇಳದೆ ಹೋಗಿದ್ದಳು. ಬ್ಯಾಗಿನಲ್ಲಿಟ್ಟಿದ್ದ ಒಡವೆಗಳು ಸಹ ಮಾಯವಾಗಿದ್ದವು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸೌಂದರ್ಯ ಮೇಲೆ ಗುಮಾನಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.