ಸರ್ಕಾರ ವಜಾಗೆ ಸಿಪಿಎಂ ಆಗ್ರಹ
ಬಾಗೇಪಲ್ಲಿ: ಬಹುಮತ ಕಳೆದುಕೊಂಡಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಮುಂಭಾಗದ ಸಿಪಿಎಂ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಸಿಪಿಎಂ ತಾಲೂಕು ಕಾರ್ಯದರ್ಶಿ ಎಂ.ಎಮ್. ರಘುರಾಮರೆಡ್ಡಿ ನೇತೃತ್ವದಲ್ಲಿ ಸಿಪಿಎಂ ಕಾರ್ಯಕರ್ತರು ಡಾ.ಎಚ್ಚೆನ್ ವೃತ್ತದಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ನಂತರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಘುರಾಮರೆಡ್ಡಿ ಮಾತನಾಡಿದರು. ಸಿಪಿಎಂ ಮುಖಂಡರಾದ ಹೆಚ್.ಎ.ರಾಮಲಿಂಗಪ್ಪ, ಗೋವರ್ದನಾಚಾರಿ, ಜಿ.ಎಂ.ರಾಮಕೃಷ್ಣಪ್ಪ, ಕೃಷ್ಣಪ್ಪ, ವಾಲ್ಮೀಕಿ ಅಶ್ವತ್ಥಪ್ಪ, ಆಂಜನೇಯರೆಡ್‌ಡಿ, ಭಾಗವಹಿಸಿದ್ದರು.