ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರತ್ಯೇಕ ಅಪಘಾತ: ಇಬ್ಬರ ಸಾವು (ಸುದ್ದಿ ಸಂಕ್ಷೇಪ)

Mainashree
Updated On : 5 Feb 2013, 12:02 pm

ಕೋಲಾರ: ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ- 4ರ ಲಕ್ಷ್ಮೀಸಾಗರ ಗೇಟ್ ಬಳಿ ರಸ್ತೆ ದಾಟುತ್ತಿದ್ದ ನೇಪಾಳ ರಾಜ್ಯಕ್ಕೆ ಸೇರಿದ ಹರೀಶ್ ಸಿಂಗ್ ಎಂಬವರಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಲಾರಿ ಹರಿದು ವ್ಯಕ್ತಿಯೊಬ್ಬ ಸತ್ತಿರುವ ಘಟನೆ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಕೋಲಾರ ತಾಲೂಕು ಬೆಟ್ಟಹೊಸಪುರ ಗ್ರಾಮದ ವಾಸಿ ನಾರಾಯಣಪ್ಪ ಮೃತಪಟ್ಟ ವ್ಯಕ್ತಿ. ತಾನು ಕೆಲಸ ಮಾಡುತ್ತಿದ್ದ ಲಾರಿಯ ಕೆಳಗೆ ಮಲಗಿದ್ದಾಗ ಲಾರಿ ಚಾಲಕ ಇದನ್ನು ಗಮನಿಸದೆ ಲಾರಿ ಚಾಲನೆ ಮಾಡಿದ ಪರಿಣಾಮ ಹಿಂದಿನ ಚಕ್ರ ನಾರಾಯಣಪ್ಪನವರ ತಲೆಯ ಮೇಲೆ ಹರಿದು ದುರಂತ ಸಂಭವಿಸಿದೆ.
ಯುವಕರಿಗೆ ಆದ್ಯತೆ ನೀಡಲು ನಿವೃತ್ತಿ
ಪಾವಗಡ: ಯುವಕರಿಗೆ ಆದ್ಯತೆ ಕಲ್ಪಿಸುವ ಹಿನ್ನೆಲೆ ಶಾಸಕ ಸ್ಥಾನದಿಂದ ತಾವು ನಿವೃತ್ತರಾಗಲಿದ್ದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ವರ್ಧಿಸಲಿರುವ ಎಚ್.ವಿ.ವೆಂಕಟೇಶ್ ಅವರನ್ನು ಬೆಂಬಲಿಸಿ ಎಂದು ಶಾಸಕ ವೆಂಕಟರಮಣಪ್ಪ ಮನವಿ ಮಾಡಿದರು. ಅವರು ಸೋಮವಾರ ತಾಲೂಕಿನ ವೈ.ಎನ್ ಹೊಸಕೋಟೆ ಪಟ್ಟಣದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷದ ಹೈಕಮಾಂಡ್ ತೀರ್ಮಾನಿಸಿದಂತೆ ಬರುವ ವಿಧಾನ ಚುನಾವಣೆಯಲ್ಲಿ ತಮ್ಮ ಪುತ್ರ ಎಚ್.ವಿ. ವೆಂಕಟೇಶ್ ಕಾಂಗ್ರೆಸ್ನಿಂದ ಸ್ವರ್ಧಿಸಲಿದ್ದು ಚುನಾವಣೆಯಲ್ಲಿ ವೆಂಕಟೇಶ್ ಅವರನ್ನು ಆಯ್ಕೆ ಮಾಡಿ ಎಂದರು.  ಬಿಜೆಪಿ ಹಾಗೂ ಜೆಡಿಎಸ್ನಿಂದ ಅನೇಕ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಇಂದು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದಕ್ಕೆ ಸಂತಸವಾಗಿದೆ ಎಂದರು. ತಾಳೇಮರದಹಳ್ಳಿ ನರಸಿಂಹಯ್ಯ, ಜಂಪಯ್ಯ, ಚಿಕ್ಕನಾಗಪ್ಪ, ವಿ.ಎನ್ ಗೋಪಾಲರೆಡ್ಡಿ, ಮಾನಂ ವೆಂಕಟಸ್ವಾಮಿ, ಜಗನ್ನಾಥಪ್ಪ, ತಾಪಂ ಮಾಜಿ ಸದಸ್ಯ ಆನಂದ್ ಮುಂತಾದವರು ಮಾತನಾಡಿ ಕಾಂಗ್ರೆಸ್ನಿಂದ ಸ್ವರ್ಧಿಸಲಿರುವ ಎಚ್.ವಿ. ವೆಂಕಟೇಶ್ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.
'ಯುವಶಕ್ತಿ ಸಂಘಟನೆ ಗುರಿ'
ಪಾವಗಡ: ತಾಲೂಕಿನಾದ್ಯಂತ ಯುವಶಕ್ತಿ ಸಂಘಟಿಸುವ ಮೂಲಕ ಪಕ್ಷ ಬಲಗೊಳಿಸಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಮತ್ತಷ್ಟು ಬಲಗೊಳಿಸುವುದಾಗಿ ಎಚ್.ವಿ. ವೆಂಕಟೇಶ್ ತಿಳಿಸಿದರು. ಅವರು ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಭಗವತ್ಪ್ರಸಾದ್ ನಿಧನ: ಸಂತಾಪ
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮುಖಂಡ ಹಾಗೂ ಕಸಬಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಭಗವತ್ಪ್ರಸಾದ್ (58) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಶೈಲಜಾ, ಪುತ್ರಿ ಕೃಷ್ಣವೇಣಿ ಇದ್ದಾರೆ.
ಹೃದಯಾಘಾತಕ್ಕೆ ತುತ್ತಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಪ್ರಸಾದ್ ಅವರು ಕೆ.ವಿ. ಡಿ.ಇಡಿ. ಕಾಲೇಜಿನ ಶಿಕ್ಷಕರಾಗಿ ಹಾಗೂ ಸುಮಾರು 15 ವರ್ಷಗಳ ಕಾಲ ಕಸಬಾ ಸಹಕಾರ ಸಂಘ ಅಧ್ಯಕ್ಷರಾಗಿದ್ದರು. ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪ ಬೆಂಬಲರಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕೆ.ವಿ.ನವೀನ್ಕಿರಣ್, ಎಂ.ಆಂಜಿನಪ್ಪ, ಬಿ.ಎ.ಲೋಕೇಶ್ಕುಮಾರ್, ಜಿ.ಎಚ್. ನಾಗರಾಜ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement