ವರ್ತೂರ್ ಬಣ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ಅವರ ನಡವಳಿಕೆಯಿಂದ ಬೇಸತ್ತು ಕ್ಷೇತ್ರದ ಅನೇಕರು ಜೆಡಿಎಸ್ ಸೇರುತ್ತಿದ್ದು, ಇದರಿಂದ ಮುಂದಿನ ಚುನಾವಣೆಯಲ್ಲಿ ತಮಗೆ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುಡ್ಡಣಪುರದ ಬಿ.ನಾರಾಯಣಸ್ವಾಮಿ, ದೇವರಾಜ್, ತಿಮ್ಮಪ್ಪ ಗಾರೆ ಮುನಿಯಪ್ಪ, ವಿಜಿಕುಮಾರ್, ಚಂದ್ರಶೇಖರ್, ಸತೀಶ್, ಅರುಣ್ ಹಾಗೂಲೋಕೇಶ್ ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ಜೆಡಿಎಸ್ಗೆ ಬರಮಾಡಿಕೊಂಡು ಮಾತನಾಡಿ, ವರ್ತೂರ್ ಪ್ರಕಾಶ್ ಸುಳ್ಳುಗಾರ, ಅಧಿಕಾರ ಸದ್ಬಳಕೆ ಮಾಡಿಕೊಳ್ಳದೆ ಜಾತಿ ರಾಜಕಾರಣ ಮಾಡುತ್ತಿರುವುದರಿಂದ ಜನ ಬೇಸತ್ತು ಜೆಡಿಎಸ್ಗೆ ಬೆಂಬಲ ನೀಡುತ್ತಿದ್ದಾರೆಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕ್ಕಲೇರಿ ಸಿ.ಎಂ. ವೆಂಕಟೇಶಪ್ಪ, ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಈರಪ್ಪ, ಸದಸ್ಯ ಬಣಕನಹಳ್ಳಿ ನಟರಾಜ್, ಅರಾಭಿಕೊತ್ತನೂರಿನ ಗ್ರಾಪಂ ಅಧ್ಯಕ್ಷ ನಾಗರಾಜ್, ಮಾರ್ಜೆನಹಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಇತರರು ಇದ್ದರು.