ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಅಂಬೇಡ್ಕರ್ ದಲಿತರಿಗೆ ಬೆಳಕು ತೋರಿದ ಆಶಾಕಿರಣ'

Rashmi Kasaragodu
Updated On : 6 Feb 2013, 12:08 pm




ಕೋಲಾರ: ಸ್ವತಂತ್ರ ಭಾರತದಲ್ಲಿ ದಲಿತರಿಗೆ ಸಿಗಬೇಕಾದ ಮೀಸಲಾತಿಯ ಕುರಿತು ದಿಟ್ಟ ಹೋರಾಟ ನಡೆಸಿದ ಮಾನವತಾವಾದಿ ಅಂಬೇಡ್ಕರ್ ದಲಿತರನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ದ ಆಶಾಕಿರಣ ಎಂದು ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹಾರೋಹಳ್ಳಿಯಲ್ಲಿ ಮಂಗಳವಾರ ದಲಿತ ಸಂಘಟನೆಗಳ ಸಂಯುಕ್ತ ರಂಗದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸವಿ ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕೆಂದರು.
ಕಾರ್ಯಕ್ರಮವನ್ನು ಆಯೋಜಿಸಿದ್ದ ವಕೀಲ ಹಾರೋಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ದಲಿತ ಯುವಕರು ಕ್ರಿಯಾಶೀಲರಾಗಿ ಎಲ್ಲೆಡೆ ತಮ್ಮ ಹಕ್ಕುಬಾಧ್ಯತೆಗಳನ್ನು ನಿರ್ವಹಿಸಿದಾಗ ಮಾತ್ರ ಅಂಬೇಡ್ಕರ್ ಆಶಯಗಳಿಗೆ ಮನ್ನಣೆ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಗಂಗಾಧರ್ ಅವರು ಬಡ ಹೆಣ್ಣು ಮಕ್ಕಳಿಗೆ ಸೀರೆಗಳನ್ನು ವಿತರಣೆ ಮಾಡಿ, ಜನತೆಯ ಸಹಕಾರ ಸಿಕ್ಕಲ್ಲಿ ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ಸಚಿವರಿಗೆ ಎಚ್ಚರಿಕೆ: ವಿಧಾನಸೌಧದ ಮುಂದೆ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸುವುದಕ್ಕೆ ಪ್ರಯತ್ನ ನಡೆಯುತ್ತಿದೆ. ಸರ್ಕಾರ ದಲಿತರ ಭಾವನೆಗಳಿಗೆ ವಿರುದ್ಧವಾಗಿ ಪ್ರತಿಮೆ ತೆರವುಗೊಳಿಸಿದಲ್ಲಿ ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ವರ್ತೂರ್ ಪ್ರಕಾಶ್ ಅವರು ಈ ವಿಚಾರದಲ್ಲಿ ದಲಿತರ ಪರ ನಿಂತು ಬೆಂಬಲ ಸೂಚಿಸದಿದ್ದರೆ ದಲಿತ ಕೇರಿಗಳಿಗೆ ಸಚಿವರು ಬರದಂತೆ ಅವರನ್ನು ಘೇರಾವ್ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿಯ ಎಸ್.ಸಿ.ಎಸ್.ಟಿ. ಸೆಲ್‌ನ ವಿ.ಕುಮಾರ್, ದಲಿತ ಮುಖಂಡರಾದ ಮುನಿರಾಜು, ಎಂ.ಶಿವಾನಂದ, ಗದ್ದೆಕಣ್ಣೂರು ನಾರಾಯಣಪ್ಪ, ಕೆ.ಮುನಿವೆಂಕಟಪ್ಪ, ಶ್ರೀರಂಗ, ಕೋಡಿರಾಮಸಂದ್ರ ನಾರಾಯಣಸ್ವಾಮಿ, ಎಸ್.ವಿ.ರವಿಕುಮಾರ್, ವೆಂಕಟರವಣಪ್ಪ, ರವಿಕುಮಾರ್, ಕೆಂಚಪ್ಪ, ಚಿನ್ನಾಪುರ ಪರಿಯಪ್ಪ, ವಿಜಯಕುಮಾರ್ ಇದ್ದರು. ಹಾರೋಹಳ್ಳಿ ನಾರಾಯಣಸ್ವಾಮಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement