ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿದು ಟೆಂಪೋ ಓಡಿಸಿದ ಚಾಲಕನಿಗೆ ಗೂಸಾ

Rashmi Kasaragodu
Updated On : 6 Feb 2013, 12:06 pm



ಚಿಂತಾಮಣಿ: ಕುಡಿದು ಮತ್ತೇರಿದ ಚಾಲಕನೊಬ್ಬ ಸರಕು ಸಾಗಾಣಿಕೆ ಟೆಂಪೋವನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಸಾರ್ವಜನಿಕರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿ ತದನಂತರ ಚಾಲಕನನ್ನು ಹಿಡಿದು ಗೂಸ ಕೊಟ್ಟು ಪೊಲೀಸರ ವಶಕ್ಕೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಯೋಗಿ ನಾರಾಯಣ ವೃತ್ತದ ಕಡೆಯಿಂದ ಸರಕು ಸಾಗಾಣಿಕೆ ಟೆಂಪೋವನ್ನು ಆಸೀಫ್ ಪಾಷ ಎಂಬಾತ ಅತಿಯಾಗಿ ಮದ್ಯ ಸೇವಿಸಿ ಅತಿ ವೇಗದಿಂದ ಚಾಲನೆ ಮಾಡಿದ ಪರಿಣಾಮ ಖಾಸಗಿ ಬಸ್ ನಿಲ್ದಾಣದ ಬಳಿ ನಾಗರಿಕರು ಪ್ರಾಣ ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿ ಹೋದರು. ನಂತರ ಚಾಲಕನ ವಿರುದ್ಧ ರೊಚ್ಚಿಗೆದ್ದ ನಾಗರಿಕರು, ಆತನನ್ನು ಹಿಡಿದು ಹಿಗ್ಗಾ ಮುಗ್ಗಾ ಹೊಡೆದು ಬುದ್ಧಿ ಕಲಿಸಿದರು.
ಸ್ಥಳೀಯ ಪೋಲೀಸರು ಈತನನ್ನು ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕುಡಿದು ಚಾಲನೆ ಮಾಡಿದ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement