ರೈತ ಸಂಘಗಳ ಕಾರ್ಯ ಶ್ಲಾಘನೀಯ: ಕೋಡಿಹಳ್ಳಿ
ಶ್ರೀನಿವಾಸಪುರ: ರಕ್ತದಾನಕ್ಕಿಂತ ಮಹಾದಾನ ಯಾವುದೂ ಇಲ್ಲ. ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಪದಾಧಿಕಾರಿಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಬಹಳ ಉಪಯುಕ್ತವಾದದ್ದು. ಈ ಒಳ್ಳೆಯ ಕೆಲಸಗಳಿಗೆ ಜನ ಸಾಮಾನ್ಯರು ನೆರವಾಗಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದರು.
ಅವರು ತಾಲೂಕು ಬಸನಹಳ್ಳಿ ಗ್ರಾಮದ ದಿವಂಗತ ಮುನಿವೆಂಕಟಮ್ಮ, ದಿವಂಗತ ಶಿವಣ್ಣ ಹಾಗೂ ದಿವಂಗತ ಈರಪ್ಪ ಎಂಬವರ ನೆನಪಿಗಾಗಿ ವಳಗೇರಹಳ್ಳಿ ಕ್ರಾಸ್‌ನಲ್ಲಿರುವ ಶಂಕರ್ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಡಿಷನಲ್ ಎಸ್‌ಪಿ ಭಗವಾನ್ ದಾಸ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಬಿ.ಜಿ. ಪ್ರಕಾಶ್, ಹಾಗೂ ಇತರರು ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜಿಲ್ಲಾಧ್ಯಕ್ಷ ಕೊತ್ತಮೀರಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಜಿಲ್ಲಾ ಉಪಾಧ್ಯಕ್ಷ ಸಿ.ವಿ. ಪ್ರಬಾಕರ್ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.