ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

11ರಂದು ಆಸ್ಪತ್ರೆಗೆ ಮುತ್ತಿಗೆಗೆ ನಿರ್ಧಾರ

Rashmi Kasaragodu
Updated On : 6 Feb 2013, 11:59 am


ಗೌರಿಬಿದನೂರು: ತಾಲೂಕಿನ ನಾಮಗೊಂಡ್ಲು ಆಸ್ಪತ್ರೆಯು ಭಾರತ ಸರ್ಕಾರ ಮಾದರಿಯ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ಈ ಆರೋಗ್ಯ ಕೇಂದ್ರ ವ್ಯಾಪ್ತಿಯಡಿ 40 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆರೋಗ್ಯ ಕೇಂದ್ರದ ವ್ಯಾಪ್ತಿಯ ಸಿಬ್ಬಂದಿಗೆ ವೈದ್ಯಾಧಿಕಾರಿಗಳ ಆಡಳಿತ ವೈಫಲ್ಯ ಮತ್ತು ಸಿಬ್ಬಂದಿಯ ಗೈರು ಹಾಜರಿಯಿಂದ ಸಕಾಲಕ್ಕೆ ವೇತನ, ಭತ್ಯೆ, ಬಡ್ತಿ ಹಾಗೂ ನಿವೃತ್ತರಿಗೆ ಸೌಲಭ್ಯ 2- 3 ವರ್ಷಗಳಿಂದ ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಕಾಲದಲ್ಲಿ ಸಿಬ್ಬಂದಿಗೆ ವೇತನ ಭತ್ಯೆ ಸಿಗದೆ ಜೀವನ ನಡೆಸುವುದೇ ಕಷ್ಟಕರವಾಗಿರುತ್ತಿದೆ. ಹೀಗಾಗಿ ಈ ಎಲ್ಲ ನ್ಯೂನ್ಯತೆ ಸರಿಪಡಿಸುವಂತೆ ಆಗ್ರಹಿಸಿ ಫೆ. 11 ರ ಸೋಮವಾರ ಆಸ್ಪತ್ರೆಗೆ ಆರೋಗ್ಯ ಸಹಾಯಕರ ಸಂಘದಿಂದ ತೀರ್ಮಾನಿಸಲಾಗಿದೆಯೆಂದು ಸಂಘದ ಪದಾಧಿಕಾರಿಗಳಾದ ಜಿ.ಎನ್. ಕೃಷ್ಣರಾವ್, ಆರ್.ವಿ. ತಿಮ್ಮಪ್ಪ ಮತ್ತು ಎನ್.ವಿ. ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿ: 2 ಗುಡಿಸಲು ಭಸ್ಮ
ಬಾಗೇಪಲ್ಲಿ: ತಾಲೂಕಿನ ಚೇಳೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಗುಡಿಸಲು ಭಸ್ಮವಾಗಿವೆ. ಗ್ರಾಮದ ವೆಂಕಟಪ್ಪ ಮತ್ತು ಶ್ರೀನಿವಾಸ ಎಂಬುವರು ತಮ್ಮ ಗುಡಿಸಲು ಮನೆಗಳಿಗೆ ಬೀಗ ಹಾಕಿಕೊಂಡು ಹೊಲಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಸುಮಾರು ಲಕ್ಷ ರು. ಮೌಲ್ಯದ ಆಹಾರ ಧಾನ್ಯ, ಪಾತ್ರೆ ಸಾಮಾನು, ಟಿವಿ ಮುಂತಾದ ಸಾಮಗ್ರಿಗಳು ಸುಟ್ಟು ಭಸ್ಮವಾಗಿದ್ದು ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು.
ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಚಿಕ್ಕಬಳ್ಳಾಪುರ: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಸಿದ ಕರ್ನಾಟಕ ರಾಜ್ಯ ಮಟ್ಟದ ಜಾನಪದ ಗೀತ ಗಾಯನ ಸ್ಫರ್ಧೆಯಲ್ಲಿ ಚಿಕ್ಕಬಳ್ಳಾಪುರದ ಶ್ರೀ ಸ್ವಾಮಿ ವಿವೇಕಾನಂದ ಕಲಾ ಬಳಗ ಪ್ರಥಮ ಬಹುಮಾನ ಪಡೆದಿದೆ.
ರಾಜ್ಯ ಜಾನಪದ ಪರಿಷತ್ತು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕಲಾ ಬಳಗದ ಅಧ್ಯಕ್ಷ ಸೋ.ಸು.ನಾಗೇಂದ್ರನಾಥ್ ಮಾರ್ಗದರ್ಶನದಲ್ಲಿ ಎಂ. ಮುನಿರಾಜು, ಎಸ್.ಜ್ಞಾನಕುಮಾರ್, ಡಿ.ಟಿ.ಮೂರ್ತಿ, ಮುರಳೀಧರ, ನರಸಿಂಹಮೂರ್ತಿ ಭಾಗವಹಿಸಿದ್ದು, ಪ್ರಥಮ ಬಹುಮಾನ ಪಡೆದಿದ್ದಾರೆ. ವಿಜೇತರನ್ನು ರಾಮನಗರ ಜಿಲ್ಲೆಯಲ್ಲಿ ಫೆ.10ರಂದು ನಡೆಯುವ ವಿಶೇಷ ರಾಜ್ಯ ಮಟ್ಟದ ಉತ್ಸವದಲ್ಲಿ ನಗದು ಬಹುಮಾನ, ಪ್ರಶಸ್ತಿಪತ್ರ, ಪಾರಿತೋಷಕ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಕಲಾ ಬಳಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement