ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ರಿಕೆಟ್: ಸ್ಟ್ರೈಕರ್ಸ್ ತಂಡಕ್ಕೆ ಗೆಲವು

Rashmi Kasaragodu
Updated On : 6 Feb 2013, 11:59 am


ಬಾಗೇಪಲ್ಲಿ: ಶಿಕ್ಷಣದ ಜತೆಗೆ ಕ್ರೀಡೆಗಳಲ್ಲೂ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದು ಚಲನಚಿತ್ರ ನಿರ್ಮಾಪಕ, ಕೆಜೆಪಿ ಮುಖಂಡ ಸಿ.ಆರ್.ಮನೋಹರ್ ಕರೆ ನೀಡಿದರು.
ಸಿ.ಆರ್.ಮನೋಹರ್ ಚಾರಿಟಬಲ್ ಟ್ರಸ್ಟ್ ಮತ್ತು ಸ್ಟ್ರೈಕರ್ಸ್ ವತಿಯಿಂದ ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 3 ದಿನಗಳ ತಾಲೂಕು ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದರು.
ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್.ನಂಜುಂಡಪ್ಪ ಅಧ್ಯಕ್ಷತೆ ವಹಿಸಿದ್ದರು.ಕೆಜೆಪಿ ಮುಖಂಡ ಮಾಧವರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ವಿ.ವೆಂಕಟರಾಮ್, ರೈತ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಕೆಂಚಾರ್ಲಹಳ್ಳಿ ಎಸ್ಐ ಜೆ.ಎನ್.ಆನಂದ್ ಕುಮಾರ್, ಬಾಗೇಪಲ್ಲಿ ಅಪರಾಧ ವಿಭಾಗದ ಎಸ್ಐ ಕೆ.ಎಂ.ಶ್ರೀನಿವಾಸಪ್ಪ, ಪಾತಪಾಳ್ಯ ಎಸ್.ಐ. ನಟರಾಜ್, ಸೈಯದ್ ಸಿದ್ಧಿಕ್, ಬಾಲಾಜಿ, ಬಿ.ಸುರೇಶ್, ರಮೇಶ್, ಭಾಸ್ಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement