ಶಿಕ್ಷಕನಿಗೆ ಪುರಸಭೆ ಅಧ್ಯಕ್ಷರ ಧಮಕಿ...
ಶ್ರೀನಿವಾಸಪುರ: ಪಟ್ಟಣದ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದ ಶಾಲಾ ಸಿಬ್ಬಂದಿಗೆ ಪುರಸಭೆ ಅಧ್ಯಕ್ಷ ಧಮಕಿ ಹಾಕಿ, ಏಕವಚನದಲ್ಲಿ ನಿಂದಿಸಿದ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಶಾಲೆಯ ಹಿಂಭಾಗದಲ್ಲಿ ಖಾಲಿ ಜಾಗವಿದ್ದು, ಕಾಂಪೌಂಡ್ ಇಲ್ಲದೆ ಇದ್ದುದರಿಂದ ಸಾರ್ವಜನಿಕರು ಅಲ್ಲಿಓಡಾತ್ತಿದ್ದು, ಇದರಿಂದ ತರಗತಿಗೆ ತೊಂದರೆಯಾಗಿದ್ದು, ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಶಾಲಾ ಸಿಬ್ಬಂದಿ ಕಾಮಗಾರಿ ಕೆಲಸಕ್ಕೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾಗ ಪುರಸಭೆಯವರು ಆ ಜಾಗ ನಮ್ಮ ವ್ಯಾಪ್ತಿಗೆ ಸೇರಿತಕ್ಕದೆಂದು ಹೇಳಿ, ಶಾಲಾ ಸಿಬ್ಬಂದಿ ಶಿಕ್ಷಕರೊಬ್ಬರ ಮೇಲೆ ಪುರಸಭಾ ಅಧ್ಯಕ್ಷ ಏಕಾಏಕಿಯಾಗಿ ರೇಗಾಡಿ ಏಕವಚನದಲ್ಲಿ ಶಿಕ್ಷಕರನ್ನು ನಿಂದಿಸಿದಾಗ, ಆ ಶಿಕ್ಷಕನು ಕೂಡ ತರಾಟೆಗೆ ತೆಗೆದುಕೊಂಡಾಗ ಅಲ್ಲಿಯೇ ಇದ್ದ ಬಿಇಒ ಹಾಗೂ ಸರ್ಕಾರಿ ನೌಕರರ ಸಂಘದ ಆಧ್ಯಕ್ಷರು ಇಬ್ಬರನ್ನು ತಡೆದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ಜನತೆಯೆಲ್ಲಾ ಕೂಡ ಸಹಕರಿಸಿ ಶಾಲಾ ಮಕ್ಕಳ ಅಸ್ತಿ ಶಾಲೆಗೆ ಉಳಿಸಿಕೊಡುವಂತೆ ಒತ್ತಾಯಿಸಿದ್ದಾರೆ.