ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಹಾರ ನಿಗಮಕ್ಕೆ ಆಂಜಿನಪ್ಪ ನೇಮಕ (ಸುದ್ದಿ ಸಂಕ್ಷೇಪ)

Mainashree
Updated On : 7 Feb 2013, 11:14 am

ಕೋಲಾರ: ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಹೆಚ್. ಮುನಿಯಪ್ಪ ಶಿಫಾರಸ್ಸಿನ ಮೇರೆಗೆ ಭಾರತ ಸರ್ಕಾರದ ಆಹಾರ ನಿಗಮ ಸಂದರ್ಶಕ ಸಮಿತಿಯ ಸದಸ್ಯರನ್ನಾಗಿ ಬುಸನಹಳ್ಳಿ ಸಿ.ಆಂಜಿನಪ್ಪ ಅವರನ್ನು ಆಹಾರ ಮತ್ತು ನಾಗರೀಕ ಮಂತ್ರಿ ಥಾಮಸ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ
ಗೌರಿಬಿದನೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 4ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ವಿದುರಾಶ್ವತ್ಥ ದಲ್ಲಿ ಫೆ 23 ರಂದು ನಡೆಯಲಿದ್ದು ಈ ಸಂಬಂಧ ಒಂದು ಸ್ಮರಣ ಸಂಚಿಕೆ ಹೊರತರಲು ಪರಿಷತ್ತಿನ ತಾಲೂಕು ಘಟಕವು ತೀರ್ಮಾನಿಸಿದೆ. ಸ್ಮರಣ ಸಂಚಿಕೆಯು ಹೆಚ್.ಎನ್.ಕಿರಣ್ ಕುಮಾರ್‌ರವರ ಸಂಪಾದಕತ್ವದಲ್ಲಿ ನಡೆಯಲಿದ್ದು ಸಂಚಿಕೆಗೆ ಲೇಖನ, ಕಥೆ, ಕವನಗಳನ್ನು ನೀಡಬಯಸುವವರು, ತಮ್ಮ ಭಾವಚಿತ್ರದ ಸಮೇತ ಫೆ 13 ರೊಳಗಾಗಿ ಶ್ರೀ ವಿನಾಯಕ ಬೇಕರಿ, ಎಂ.ಜಿ.ವೃತ್ತ ಇಲ್ಲಿಗೆ ತಲುಪಿಸಲು  ಕೋರಿದೆ.
ಸವಿತಾ ಸಮಾಜಕ್ಕೆ ಬಜೆಟ್‌ಲ್ಲಿ ಒತ್ತು ನೀಡಿ
ಕೋಲಾರ: ಬಜೆಟ್‌ನಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಸವಿತಾ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿಗಧಿಪಡಿಸಬೇಕೆಂದು ಜಿಲ್ಲಾ ಸವಿತಾ ಸಮಾಜದ ಮುಖಂಡರು ಸಿಎಂ ಹಾಗೂ ಕಾರ್ಮಿಕ ಸಚಿವರನ್ನು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಸವಿತಾ ಸಮಾಜದ ಮುಖಂಡರ ನಿಯೋಗ ಕಾರ್ಮಿಕ ಸಚಿವ ಬಚ್ಚೇಗೌಡರು ಮತ್ತು ವಸತಿ ಸಚಿವ ಸೋಮಣ್ಣ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ. ಕ್ಷೌರಿಕ ವೃತ್ತಿ ಅವಲಂಬಿತ ಸವಿತಾ ಸಮಾಜದವರಿಗೆ ಅಸಂಘಟಿತ ಕಾರ್ಮಿಕ ವಲಯದಲ್ಲಿ ಸೇರ್ಪಡೆ ಮಾಡಿ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಕರ್ಯಗಳನ್ನು ಪಡೆಯುವುದಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರಲ್ಲದೆ, ಪ್ರತಿ ತಾಲೂಕಿನಲ್ಲಿ ಸವಿತಾ ಸಮಾಜಕ್ಕೆ 500 ಗುಂಪು ಮನೆಗಳನ್ನು ನೀಡಲು ವಸತಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ನಿಯೋಗದ ನೇತೃತ್ವವನ್ನು ಕೋಲಾರ ಜಿಲ್ಲಾ ಸವಿತಾ ಸಮಾಜದ ಸಂಚಾಲಕ ಎಸ್.ಮಂಜುನಾಥ್ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಎಸ್.ವಿ. ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ವೇಣುಗೋಪಾಲ್, ಚಿಂತಾಮಣಿ ಶ್ರೀನಿವಾಸ್, ಶಿಡ್ಲಘಟ್ಟ ರಾಜಣ್ಣ, ಬಂಗಾರಪೇಟೆಯ ರಾಮಕೃಷ್ಣಪ್ಪ, ಪ್ರಸಾದ್, ವೆಂಕಟೇಶ್ ಇನ್ನಿತರರು ಇದ್ದರು.
ಜೆಡಿಎಸ್‌ಗೆ ನೇಮಕ
ಕೋಲಾರ: ಜಿಲ್ಲಾ ಜೆಡಿಎಸ್‌ಯುವ ಘಟಕದ  ಜಿಲ್ಲಾ ಕಾರ್ಯದರ್ಶಿಯಾಗಿ ತಿಮ್ಮಸಂದ್ರ ಗ್ರಾಮದ ಟಿ.ಆರ್. ಶ್ರೀನಿವಾಸ್ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಡಗೂರು ಗ್ರಾಮದ ವಿ.ಆರ್. ರಾಮಮೂರ್ತಿ ಅವರನ್ನು ನೇಮಕ ಮಾಡಿರುವುದಾಗಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಎಂ. ಮುಬಾರಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement