ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೌಷ್ಟಿಕ ಆಹಾರ ನೀಡಿ ಮಕ್ಕಳ ಆರೋಗ್ಯ ರಕ್ಷಿಸಿ: ರಘುನಾಥ

Mainashree
Updated On : 7 Feb 2013, 11:14 am

ಗೌರಿಬಿದನೂರು: ಪೌಷ್ಟಿಕ ಆಹಾರ ನೀಡುವ ಮೂಲಕ ತಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿ. ಅವರ ಮುಂದಿನ ಜೀವನದಲ್ಲಿ ಶರೀರದಲ್ಲಿನ ರೋಗನಿರೋಧಕ ಶಕ್ತಿಯಿಂದ ಅನಾರೋಗ್ಯಗಳಿಂದ ದೂರವಾಗಿ ಸುಖವಾಗಿ ಬಾಳಲು ಅವಕಾಶ ನೀಡಿ ಎಂದು ನಾಮಗೊಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ರಘುನಾಥ್ ರವರು ನುಡಿದರು.
ಅವರು ನಾಮಗೊಂಡ್ಲು ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿದ್ದ ಮಕ್ಕಳ ತಾಯಂದಿರನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ಅಪೌಷ್ಟಿಕತೆ ಇರುವ ಮಕ್ಕಳಿಗೆ ವೈದ್ಯಕೀಯ ಸೌಲಭ್ಯ ನೀಡಲು ಆರೋಗ್ಯ ಇಲಾಖೆಗೆ ಹಾಗು ಪೌಷ್ಟಿಕ ಆಹಾರವನ್ನು ನೀಡುವ ಹೊಣೆಗಾರಿಕೆಯನ್ನು ಅಂಗನವಾಡಿಗಳಿಗೆ ಒಪ್ಪಿಸಿದೆ. ಈ ದಿಶೆಯಲ್ಲಿ ಪ್ರತಿ ತಿಂಗಳು ಈ ಆರೋಗ್ಯಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಕ್ಕಳ ತಾಯಂದಿರು ತಮ್ಮ ಮಕ್ಕಳನ್ನು ಕರೆತಂದು ಆರೋಗ್ಯ ಪರೀಕ್ಷೆ ಮಾಡಿಸಬೇಕಾಗಿದೆ ಎಂದರು.
ಈತನಕ ಮಾಡಿದ ಪರೀಕ್ಷೆಗಳಲ್ಲಿ ಇಬ್ಬರು ಮಕ್ಕಳಿಗೆ ಹೃದಯ ಸಂಬಂಧ ರೋಗಗಳಿದ್ದು ಈ ತಿಂಗಳು 15ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ವಾಜಪೇಯಿ ಆರೋಗ್ಯ ಶ್ರೀ ಕಾರ್ಯಕ್ರಮದಲ್ಲಿ ಹೃದಯ ತಜ್ಞರಿಂದ ಚಿಕಿತ್ಸೆ ನೀಡಲಾಗುವುದು ಎಂದರು.
ಅಂಗನವಾಡಿ ಮೇಲ್ವಿಚಾರಕಿಯಾದ ಅಲಿವೇಲಮ್ಮ ಮನೆಗಳಲ್ಲಿನ ಶುಚಿತ್ವದ ಬಗ್ಗೆ ಮಹಿಳೆಯರಿಗೆ ಸಲಹೆ ಸೂಚನೆಗಳನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement