ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುಶಿಕ್ಷಿತರಿಂದಲೇ ಹೆಚ್ಚುತ್ತಿರುವ ವೃದ್ಧಾಶ್ರಮ: ದೇವಯ್ಯ ವಿಷಾದ

Mainashree
Updated On : 7 Feb 2013, 11:12 am

ಗೌರಿಬಿದನೂರು: ಪ್ರಸ್ತುತ ಪ್ರಪಂಚದಲ್ಲಿ ವೃದ್ಧಾಶ್ರಮಗಳು ಬೆಳೆಯುತ್ತಿರುವುದು ವಿದ್ಯಾವಂತರಿಂದಲೇ ಹೊರತು ಅವಿದ್ಯಾವಂತರಿಂದಲ್ಲ. ಉತ್ತಮ ಸೇವೆಯಲ್ಲಿರುವ ಯುವಕರು ಅವರ ಏಳಿಗೆಗೆ ಪಾತ್ರರಾದ ಪೋಷಕರನ್ನು ಗಮನಿಸದೆ ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಸ್ಥಿತಿ ನಿರ್ಮಾಣಲಾಗಿದೆ ಎಂದು ಡಿವೈಎಸ್ಪಿ ದೇವಯ್ಯ ತಿಳಿಸಿದರು.
ಬುಧವಾರ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ನ್ಯಾಷನಲ್ ಕಾಲೆಜಿನ ಬೆಳ್ಳಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ದೇಶದಲ್ಲಿ ಯುವಕರು ಹಾದಿ ತಪ್ಪುತ್ತಿದ್ದು, ಹಿರಿಯರ ಬಗ್ಗೆ ಗೌರವ ಸೂಚಿಸುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಎನ್.ಎಂ. ರವಿನಾರಾಯಣರೆಡ್ಡಿ ಮಾತನಾಡಿ, ಪಾಕಿಸ್ತಾನದ ಪುಂಡರು ನಮ್ಮ ಸೈನಿಕರಿಗೆ ತಲೆ ಕತ್ತರಿಸಿದಾಗಲೂ ಯುವಜನತೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅನ್ಯಾಯದ ವಿರುದ್ಧ ಹೋರಾಡುವಲ್ಲಿ ಯುವಕರ ನಿಸ್ಸಾಯಕತೆ ಎದ್ದು ತೋರುತ್ತಿದೆ ಎಂದು ವಿಷಾದಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥ್‌ರೆಡ್ಡಿ ಮಾತನಾಡಿ, ಎಬಿವಿಪಿ ದೇಶದಲ್ಲಿ ವಿದ್ಯಾರ್ಥಿಗಳ ಸಮಸ್ಯೆಯ ವಿರುದ್ಧ ಹೋರಾಡುವ ಹಾಗೂ ಎಲ್ಲಾ ಹೋರಾಟಗಳ ಯಶಸ್ಸನ್ನು ಕಂಡಿರುವ ಏಕೈಕ ಸಂಘಟನೆ ಎಂದರು.
ಚಿಕ್ಕಬಳ್ಳಾಪುರದ ಡಿವೈಎಸ್ಪಿ ದೇವಯ್ಯ, ಎನ್.ಎಂ. ರವಿನಾರಾಯಣರೆಡ್ಡಿ, ಗೌರಿಬಿದನೂರಿನ ಆರಕ್ಷಕ ವೃತ್ತ ನಿರೀಕ್ಷಕ ಲಕ್ಷ್ಮಯ್ಯ, ಉಪನಿರೀಕ್ಷಕ ದಯಾನಂದ್, ಎಂ.ವಿ. ಕೃಷ್ಣಮೂರ್ತಿ, ನ್ಯಾಷನಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ನಾಗರಾಜು. ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥ್‌ರೆಡ್ಡಿ ಇದ್ದರು. ಕಾರ್ಯಕ್ರಮವನ್ನು ವಿಂದ್ಯಶ್ರೀ ಸ್ವಾಗತಿಸಿ, ಶಿಲ್ಪ ವಂದಿಸಿದರು. ನಗರ ಪ್ರಮುಖರಾದ ನವೀನ್ ನಿರೂಪಿಸಿದರು. ತಾಲೂಕು ಸಂಚಾಲಕ ವಿಜಕುಮಾರ್, ಕಾರ್ಯದರ್ಶಿ ಹರೀಶ್, ಸಂತೋಷ್, ಮಮತ, ಭಾಗ್ಯ, ಗೌತಮಿ, ಸುಶ್ಮಿತ, ಅಶ್ವಿನಿ, ಅಶ್ವರ್ಯ, ಲಾವಣ್ಯ ಶ್ವೇತ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement