ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರ್ತೂರ್ ಬಣದ ಸಮಾವೇಶ 17ಕ್ಕೆ ಮುಂದೂಡಿಕೆ

Mainashree
Updated On : 10 Feb 2013, 12:13 pm

ಕೋಲಾರ:  ಇದೇ ಫೆ.13 ರಂದು ನಿಗದಿಯಾಗಿದ್ದ ಕ್ಯಾಲನೂರು ಹಾಗೂ ವೇಮಗಲ್ ಹೋಬಳಿಗಳ ಸಚಿವ ವರ್ತೂರು ಬಣದ ಕಾರ್ಯಕರ್ತರ ಸಮಾವೇಶವನ್ನು ಫೆ.17ಕ್ಕೆ ಮುಂದೂಡಲಾಗಿದೆ. ತಮ್ಮ ಬಣದ ಕಾರ್ಯಕರ್ತರು ಮತ್ತು ಮುಖಂಡರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಮನವಿ ಮಾಡಿದರು.
ತಾಲೂಕಿನ ಕ್ಯಾಲನೂರಿನಲ್ಲಿ ಶನಿವಾರ ನಡೆದ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದು, ಸಮಾವೇಶದ ಪ್ರಯುಕ್ತ ಧ್ವನಿವರ್ಧಕಗಳ ಶಬ್ಧದಿಂದ ಪಾಠ -ಪ್ರವಚನಗಳಿಗೆ ತೊಂದರೆಯಾಗುವ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದರು.
ಫೆ.17 ಭಾನುವಾರ. ಆದ್ದರಿಂದ ಶಾಲಾ -ಕಾಲೇಜುಗಳಿಗೆ ರಜೆ ಇರುತ್ತದೆ. ಇದರಿಂದ ಯಾವುದಕ್ಕೂ ಸಮಸ್ಯೆ ಆಗುವುದಿಲ್ಲ. ದಿನಾಂಕ ಮುಂದೂಡಿರುವುದರಿಂದ ತಮ್ಮ ಬಣದ ಕಾರ್ಯಕರ್ತರು ಹಾಗೂ ಮುಖಂಡರು ಅಸಮಾಧಾನಪಟ್ಟುಕೊಳ್ಳದೆ ಹುರುಪಿನಿಂದ ಕೆಲಸ ಮಾಡುವ ಮೂಲಕ ಸಮಾವೇಶದಲ್ಲಿ 20 ಸಾವಿರ ಮಂದಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ಮುನ್ನಾ, ಜಬ್ಬಾರ್‌ಸಾಬ್, ನಾರಾಯಣಮೂರ್ತಿ, ಕೃಷ್ಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ನಜೀರ ಅಹಮದ್, ರಾಜಣ್ಣ, ತಿಪ್ಪೇನಹಳ್ಳಿ ನಾಗೇಶ್, ರಿಜ್ವಾನ್, ರಾಮಚಂದ್ರಪ್ಪ, ಸೀತಿ ಹೊಸೂರು ಬೈರಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement