ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್ ನಿಲ್ದಾಣಕ್ಕೆ ಜಮೀನು: ಅಮರೇಶ್ ಭರವಸೆ

Rashmi Kasaragodu
Updated On : 11 Feb 2013, 12:09 pm

ಮುಳಬಾಗಲು:  ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ರಾಜ್ಯ ಸಾರಿಗೆ ವಾಹನದ ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಕೊಡಿಸುವುದಾಗಿ ಶಾಸಕ ಅಮರೇಶ್ ಭರವಸೆ ನೀಡಿದರು.
ಪಟ್ಟಣದಲ್ಲಿ ನೂತನ ಬಸಸ್ನಿಲ್ದಾಣಕ್ಕೆ ಶನಿವಾರ ಶಂಕುಸ್ಥಾನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಗ್ರಾಮಗಳಿಗೂ ಬಸ್ ಸೌಕರ್ಯ ನೀಡಲಾಗುವುದು ಎಂದರು.
ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥಪ್ರಸಾದ್ ಮಾತನಾಡಿ, ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಚಾಲಕರ ತರಬೇತಿ ಕೇಂದ್ರವನ್ನು ಪ್ರಾರಂಭಿಸುವುದಾಗಿ ನುಡಿದರು. ಇದರಿಂದಾಗಿ ಯುವಕರು ಚಾಲಕರ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳಬಹುದು.
ಪರಿಶಿಷ್ಟಜಾತಿ ಮತ್ತು ವರ್ಗಗಳವರಿಗೆ ಉಚಿತವಾದ ತರಬೇತಿ ಸೌಕರ್ಯ ನೀಡಲು ಉದ್ದೇಶಿಸಲಾಗಿದೆ.  ಹಿಂದುಳಿದ ಕೋಮಿನ ಯುವಕರಿಗೂ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ನುಡಿದರು.
ಸಾರಿಗೆ ನೌಕರರ ವೇತನ ಏರಿಸಲಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಸೌಕರ್ಯ ನೀಡಲಾಗುವುದು. ಸಾರಿಗೆ ನೌಕರರು ಜನಸ್ನೇಹಿಗಳಾಗಿ ಸೇವೆ ಸಲ್ಲಿಸಬೇಕು. ಸಾರಿಗೆ ಸಂಸ್ಧೆಯನ್ನು ಲಾಭದಾಯಕವಾಗಿ ನಡೆಸಲು ನೌಕರರು ಸಹಕರಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಮಾಜಿ ಅಧ್ಯಕ್ಷರಾದ ಟೆ.ಎಂ.ಶ್ರೀನಿವಾಸ್, ಚಿಕ್ಕರೆಡ್ಡಪ್ಪ ಶೆಟ್ಟಿ, ತಾಲೂಕು ಕುರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೆಂಕಟೇಶಗೌಡ, ನಾರಾಯಣರೆಡ್ಡಿ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement