ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವೈದ್ಯರ ಮುಷ್ಕರ: ಆಸ್ಪತ್ರೆಗಳು ಭಣಭಣ

Rashmi Kasaragodu
Updated On : 11 Feb 2013, 12:10 pm


ಚಿಕ್ಕಬಳ್ಳಾಪುರ:  ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಕೈಗೊಂಡಿರುವ ಮುಷ್ಕರದ 2ನೇ ದಿನವಾದ ಶನಿವಾರ ಸಹ ರೋಗಿಗಳು ಚಿಕಿತ್ಸೆಯಿಲ್ಲದೇ ಪರದಾಡಿದರು. ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಸರ್ಕಾರಿ ಆಸ್ಪತ್ರೆಗಳು ಬಿಕೋ ಎನ್ನುತ್ತಿದ್ದವು. ರಾಜ್ಯ ಸರ್ಕಾರದ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿರುವ ಆರೋಗ್ಯ ಇಲಾಖೆಯ ಸರ್ಕಾರಿ ವೈದ್ಯರು, ಸಿಬ್ಬಂದಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ನಿಲ್ಲಿಸಿ ಮುಷ್ಕರವನ್ನು ಕೈಗೊಂಡಿದ್ದಾರೆ. ಇದರ ಪ್ರಭಾವ ಸಾರ್ವಜನಿಕರ ಮೇಲೆ ಬಿದ್ದಿದೆ. ಬಡ ಜನರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಏನೂ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ಸಾಗುತ್ತಿದ್ದಾರೆ. ಮತ್ತಷ್ಟು ಮಂದಿ ಖಾಸಗೀ ಆಸ್ಪತ್ರೆಗಳಿಗೆ ಆರ್ಥಿಕ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬಹುತೇಕ ವಾರ್ಡುಗಳು ಖಾಲಿಯಾಗಿವೆ.ಕೆಲ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ಕೆಲವರು ಆರ್ಥಿಕ ಸಮಸ್ಯೆಯಿಂದ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಗರ್ಭಿಣಿಯರು, ಗಂಭೀರವಾದ ಕಾಯಿಲೆಗೆ ತುತ್ತಾಗಿರುವವರ ಗೋಳು ಕೇಳುವವರೇ ಇಲ್ಲ. ಇನ್ನೂ ಬಹುತೇಕ ಮಂದಿ ಸಿಬ್ಬಂದಿ ಬಂದ ರೋಗಿಗಳನ್ನು ಖಾಸಗೀ ಆಸ್ಪತ್ರೆಗೆ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದು ಇತ್ತ ಸಾರ್ವಜನಿಕರು ಮುಷ್ಕರ ನಿಂತು ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಒತ್ತಾಯಿಸಿದ್ದಾರೆ.
ಮುಸ್ಲಿಮರಿಂದ ಶ್ರೀಗಂಧೋತ್ಸವ
ಚಿಂತಾಮಣಿ:  ನಗರದ ಟಿಪ್ಪುನಗರದ ಹಜರತ್ ಸೈಯದ್ ಮುಸ್ತಾಫ್ ಖಾದರಿ ದರ್ಗಾದ ಗಂಧೋತ್ಸವ ಅಂಗವಾಗಿ ರಾತ್ರಿ ವಿಶೇಷ ದೀಪಾಲಂಕಾರ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಈ ಸಂಬಂಧ ಮೆರವಣಿಗೆ ನಡೆಸಲಾಯಿತು. ನಂತರ ದರ್ಗಾ ಸೇರಿಕೊಂಡಿತ್ತು ಮೆರವಣಿಗೆಯಲ್ಲಿ ಶ್ರೀಗಂಧ ಮೆರವಣಿಗೆ ನಡೆಯಿತು. ತಮಟೆ ವಾದ್ಯ ನಡೆಸಿಕೊಟ್ಟರು. ವಿವಿಧ ಮುಸ್ಲಿಂ ಧಾರ್ಮಿಕ ಗುರುಗಳಿಂದ ಕುರಾನ್ ಪಠಣ ನಡೆಯಿತು.  ಮೆರವಣಿಗೆಯಿಂದಾಗಿ ನಗರದಲ್ಲಿ ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸ್ತಬ್ಧ ಚಿತ್ರಗಳಲ್ಲಿ ಟಿಪ್ಪು ವೇಷಾಧಾರಿ ಅತ್ಯಾಕರ್ಷಕವಾಗಿತ್ತು. ದರ್ಗಾ ಮುಂದೆ ಹಮ್ಮಿಕೊಂಡಿದ್ದ ಕವ್ವಾಲಿಯಲ್ಲಿ ಹೆಸರಾಂತ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.
ಯುವಕ ಆತ್ಮಹತ್ಯೆ
ಚಿಂತಾಮಣಿ:  ಸಾಲಗಾರರ ಕಾಟ ತಡೆಯಲಾರದೆ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುನಗನಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ತಾಲೂಕಿನ ಮುನಗನಹಳ್ಳಿ ಗ್ರಾಮದ ಪುಟ್ಟರಾಜು (25) ಮೃತಪಟ್ಟ ಯುವಕ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಸುದ್ದಿ ತಿಳಿದ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಕೇಸ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement