ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಕೂಡಲೇ ನೀರಿನ ಸಮಸ್ಯೆ ನಿವಾರಿಸಿ' (ಸುದ್ದಿ ಸಂಕ್ಷೇಪ)

Mainashree
Updated On : 12 Feb 2013, 12:10 pm

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈಗಿನಿಂದಲೇ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿ.ಪಂ ಉಪಾಧ್ಯಕ್ಷ ಅಶ್ವತ್ಥಪ್ಪ ಆತಂಕ ವ್ಯಕ್ತಪಡಿಸಿದರು. ಜಿ.ಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 314 ಕೊಳವೆ ಬಾವಿಗಳನ್ನು ಕೊರೆದಿದ್ದು ಇದರಲ್ಲಿ 209 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಆದರೆ 105 ಕೊಳವೆ ಬಾವಿಗಳು ವಿಫಲವಾಗಿವೆ. ಅದೇ ರೀತಿ ಬಹಳಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕುಗಳಲ್ಲಿ ಸಮಸ್ಯೆ ಇನ್ನೂ ಹೆಚ್ಚಾಗಿದೆ ಎಂದು ಅಧಿಕಾರಿ ತಿಳಿಸಿದರು.ಕೊಳವೆ ಬಾವಿಗಳು ವಿಫಲವಾಗಿ ಜಿಲ್ಲಾದ್ಯಂತ ಸಮಸ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ಸುಮ್ಮನಾಗುವಂತಾಗಿದೆ. ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಇದರಿಂದ ಶೇ.60 ರಷ್ಟಾದರೂ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜಿ.ಪಂ ಉಪಾಧ್ಯಕ್ಷ ಅಶ್ವತ್ಥಪ್ಪ ಸಲಹೆ ನೀಡಿದರು.
'ಯುವ ಪೂರಕ ಕ್ರೀಡಾ ನೀತಿ ಬೇಕು'
ಕೋಲಾರ: ಮುಂದಿನ ಪೀಳಿಗೆಗೆ ಮತ್ತು ಯುವಜನತೆಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಡಾ ನೀತಿಯನ್ನು ರೂಪಿಸಲು ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಸಕಾರಾತ್ಮಕ ಸಲಹೆಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದರು. ಅವರು ಗುರುವಾರ ತಮ್ಮ ಕಚೇರಿಯಲ್ಲಿ ಕ್ರೀಡಾ ನೀತಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಸೌಲಭ್ಯಗಳು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ನೀಡಬೇಕು, ಪ್ರತಿಯೊಂದು ಇಲಾಖೆಯಲ್ಲಿ ಲೋಪಗಳು ಇರುವುದು ಸಹಜ. ಆದರೆ, ತಪ್ಪುಗಳು ಪುನರಾವರ್ತನೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಿ ಸರ್ಕಾರದ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಯಾವುದೇ ಕೆಲಸ ಮಾಡುವಾಗ ಹಲವಾರು ಎಡರು ತೊಡರುಗಳು ಇರುತ್ತವೆ. ನಕಾರಾತ್ಮಕ ಯೋಚನೆ ಬಿಟ್ಟು ಸಕಾರಾತ್ಮಕವಾಗಿ ಚಿಂತನೆ ಮಾಡುವ ಮೂಲಕ ಕ್ರೀಡಾ ನೀತಿ ದೇಶಕ್ಕೆ ಮಾದರಿ ಆಗುವಂತೆ ನೋಡಿಕೊಳ್ಳಬೇಕು, ಇದಕ್ಕೆ ಬೇಕಾದ ಪೂರಕವಾಗುವ ಸಲಹೆಗಳನ್ನು ಸಾರ್ವಜನಿಕರಿಂದ ಮತ್ತು ಕ್ರೀಡಾಪಟುಗಳಿಂದ ಪಡೆಯುವುದು ಸೂಕ್ತವೆಂದರು. ಕ್ರೀಡಾ ನೀತಿ ಸಮಿತಿ ಸದಸ್ಯರಾದ ಎಂ.ಪಿ. ಗಣೇಶ್ ಮಾತನಾಡಿ ನೂತನ ಕ್ರೀಡಾ ನೀತಿ ರೂಪಿಸಲು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಕ್ರೀಡಾಪಟುಗಳು ಹಾಗೂ ಸಂಘ ಸಂಸ್ಥೆಗಳಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದು ಹೇಳಿದರು.
'ಯರಗೋಳ್ ಸಂತ್ರಸ್ತ ರೈತರಿಗೆ ಪರ್ಯಾಯ ಭೂಮಿ ನೀಡಿ'
ಬಂಗಾರಪೇಟೆ: ಯರಗೋಳ್ ಯೋಜನೆಯ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಮುಳುಗಡೆಯಾಗುವ ರೈತರ ಜಮೀನುಗಳ ಬದಲಿಗೆ ಪರ್ಯಾಯ ಜಮೀನು ನೀಡಬೇಕೆಂದು ಒತ್ತಾಯಿಸಿ ಯರಗೋಶ್ ಗ್ರಾಮದ ನಿವಾಸಿಗಳು ತಹಸೀಲ್ದಾರ್ ಮಂಗಳಾ ಅವರಿಗೆ ಮನವಿ ಸಲ್ಲಿಸಿದರು.
ಬಂಗಾರಪೇಟೆ, ಮಾಲೂರು, ಕೆಜಿಎಫ್ ಮತ್ತು ಕೋಲಾರ ತಾಲೂಕಿನ ಜನರ ಬಾಯಾರಿಕೆ ನೀಗಿರುವ ಯರಗೋಶ್ ಯೋಜನೆ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಅಣೆಕಟ್ಟು ಮಾತ್ರ ನಿರ್ಮಾಣ ಮಾಡಬೇಕಿದ್ದು, ಕಾರ್ಯಕ್ಕೆ ಯರಗೋಳ್ ಮತ್ತು ಸುತ್ತಮುತ್ತಲಿನ ರೈತರ 127 ಎಕರೆ ಜಮೀನು ಮುಳುಗಡೆಯಾಗಲಿದ್ದು, ರೈತರು ತಮ್ಮ ಜಮೀನು ನೀಡಲು ಒಪ್ಪಿದ್ದಾರೆ. ಆದರೆ ರೈತರ ಜಮೀನುಗಳ ಬದಲಾಗಿ ಸರ್ಕಾರಿ ಗೋಮಾಳ ಜಮೀನು ರೈತರಿಗೆ ನೀಡಬೇಕು ಹಾಗೂ ಎಕರೆಗೆ ಕನಿಷ್ಠ ಪಕ್ಷ ಹತ್ತು ಲಕ್ಷ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಲಮಂದೆ ಗ್ರಾಪಂ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ್‌ರಾವ್, ತಾಪಂ ಸದಸ್ಯೆ ಅಂಬೂಬಾಯಿ, ಮುಖಂಡರಾದ ಕೇದರ್ ರಾವ್, ಮನೋಜಿರಾವ್, ರಘುರಾವ್, ಗೋಪಾಲಲ್ರಾವ್, ಗಿರಿಪ್ರಸಾದ್, ಹನುಮಂತರಾವ್, ನಾರಾಯಣರಾವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement