ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಾಲ್ಮೀಕಿ ಸಮಾಜ ಒಗ್ಗಟ್ಟಿಗೆ ಸಮಾವೇಶ: ಸತೀಶ ಜಾರಕಿಹೋಳಿ

Mainashree
Updated On : 12 Feb 2013, 12:07 pm

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾಲ್ಮೀಕಿ ಸಮಾಜವನ್ನು ಒಗ್ಗೂಡಿಸಲು ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೋಳಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾಲ್ಮೀಕಿ ಸಮಾಜವನ್ನು ಜಾಗೃತಿಗೊಳಿಸಲು ಹಾಗೂ ಕಾಂಗ್ರೆಸ್ ಬೆಂಬಲಿಸಿ ಎಂದು ಕರೆ ನೀಡಿದರು.
ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮಾಜದವರು ಪ್ರಾಂತೀಯ ಪಕ್ಷಗಳನ್ನು ಕೈಬಿಟ್ಟು ಕಾಂಗ್ರೇಸ್ ಕೈ ಬಲಪಡಿಸಲು ವಾಲ್ಮೀಕಿ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.  ಕನ್ನಡಪ್ರಭ ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಗಿಮಿಕ್ ಮಾಡಲು ಬಂದಿರುವುದಾಗಿ ಹಲವರು ಮಾತನಾಡಿಕೊಳ್ಳುತ್ತಿರುವುದರ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದಾಗ ಹೌದು. ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರುವುದಾಗಿ ಒಪ್ಪಿಕೊಂಡರು. ಟಿ.ಈಶ್ವರಪ್ಪ ಹಾಗೂ ಪರಿಶಿಷ್ಟ ವರ್ಗದ ಜಿಲ್ಲಾಧ್ಯಕ್ಷ ಆ.ನಾ.ಪ್ರಸಾದ್ ಹಾಗೂ ಎಸ್.ಸಿ-ಎಸ್.ಟಿ ವಿಭಾಗದ ಮಾಜಿ ಅಧ್ಯಕ್ಷ ತಿನಕಲ್ ಪೆದ್ದಪ್ಪಯ್ಯ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement