ಕುಡಿದು ಬಸ್ ಚಾಲಕನ ಮೇಲೆ ಹಲ್ಲೆ
ಚಿಂತಾಮಣಿ: ಕಂಠ ಪೂರ್ತಿ ಕುಡಿದ ಯುವಕನೊಬ್ಬ ಕೆಎಸ್ಆರ್ಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಚೇಳೂರು ವೃತ್ತದ ಬಳಿ ಬುಧವಾರ ಸಂಜೆ ನಡೆದಿದೆ. ನಗರದ ಹಮಾಲಿಯಾದ ಈತ ಕನಂಪಲ್ಲಿಯ ನಿವಾಸಿ ಕೆಎಸ್ಆರ್ಟಿಸಿ ಚಾಲಕ ವೆಂಕಟೇಶ್ ಎಂಬಾತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ್ದಾನೆ ಎಂದು ಪೋಲೀಸರಿಗೆ ದೂರು ನೀಡಲಾಗಿದೆ. ಕೂಡಲೇ ನಗರ ಠಾಣೆಯ ವೃತ್ತ ನಿರೀಕ್ಷಕ ನಂಜಪ್ಪ ಹಲ್ಲೆ ನಡೆಸಿದ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.