ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನರಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಬಂಧನ

Rashmi Kasaragodu
Updated On : 15 Feb 2013, 12:36 pm

ಕೆಜಿಎಫ್: ಸಾರ್ವಜನಿಕರಿಗೆ ಬೆದರಿಕೆ ಹಾಗೂ ಭಯದ ವಾತಾವರಣ ಉಂಟು ಮಾಡುತ್ತಿದ್ದ ವ್ಯಕ್ತಿಯನ್ನು ಮುನ್ನೆಚರಿಕೆ ಕ್ರಮದಡಿ ಪೊಲೀಸರು ಬಂಧಿಸಿರುವ ಪ್ರಕರಣ ದಾಖಲಾಗಿದೆ.  ಬೆಮೆಲ್‌ನಗರದ ಜಿ.ಬ್ಲಾಕ್ ನಿವಾಸಿ ಫ್ರಾಂಕ್ ಎಂಬುವನು ಇ.ಟಿ. ಬ್ಲಾಕ್, ಎಸ್.ಟಿ. ಬ್ಲಾಕ್, ಡಿ. ಬ್ಲಾಕ್ ಹಾಗೂ ಎಫ್. ಬ್ಲಾಕ್ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ, ಬೆದರಿಕೆ, ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಇತರೆ ಕಿರುಕುಳ ನೀಡುತ್ತಿರುವುದಾಗಿ ಬಂದ ದೂರುಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ಪಿಎಸ್‌ಐ ನಾರಾಯಣಸ್ವಾಮಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement