ಪ್ರೇಮಿಗಳ ದಿನ ಬೇಡ, ದೇಶಪ್ರೇಮ ದಿನ ಬೇಕು
ಚಿಂತಾಮಣಿ: ಪ್ರೇಮಿಗಳ ದಿನಾಚರಣೆ ಬದಲಾಗಿ ದೇಶಪ್ರೇಮ ದಿನಾಚರಣೆಯನ್ನಾಗಿ ಆಚರಿಸುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ನಗರದಲ್ಲಿ ಎ.ಬಿ.ವಿ.ಪಿ. ಸಂಘಟನೆಯಿಂದ ಫೆ.14ರಂದು ವಿದೇಶಿ ಸಂಸ್ಕೃತಿ ರೀತಿಯಲ್ಲಿ ಆಚರಿಸಲ್ಪಡುವ ಅಹಸ್ಯಕರ ಪ್ರೇಮಿಗಳ ದಿನಾಚರಣೆ ಬದಲಿಸಬೇಕು. ಈ ದಿನವನ್ನು ದೇಶಪ್ರೇಮ ದಿನಾಚರಣೆಯಾಗಿ ಆಚರಿಸಬೇಕೆಂದು ಅರಿವು ಮೂಡಿಸಲಾಯಿತು.
ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಗರ ಪೊಲೀಸ್ ಠಾಣೆ ಬಳಿ ಪೊಲೀಸರಿಗೆ ರಾಖಿ ಕಟ್ಟುವ ಮೂಲಕ ಪ್ರೇಮಿಗಳ ದಿನಾಚರಣೆ ವಿರೋಧಿಸುವ ವಿನೂತನಾ ಕಾರ್ಯಕ್ರಮ ಹಮ್ಮಿಕೊಂಡರು. ಲೈಂಗಿಕ ದೌರ್ಜನ್ಯ ಪಬ್, ಬಾರ್, ರೆಸ್ಟೋರೆಂಟ್ ಹಾಗೂ ಇತರೆ ಕಾನೂನು ಉಲ್ಲಂಘನೆಯ ಚಟುವಟಿಕೆಗಳಿಂದ ನೈಜ ಪ್ರೇಮ ಹಾಳಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಮುಖಂಡರಾದ ಮಂಜುನಾಥರೆಡ್ಡಿ, ಸುರೇಶ್, ಶಿಲ್ಪಾ, ಚೈತ್ರ, ಸುಷ್ಮಿತಾ, ಟಿಪ್ಪು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.