ಎಲೆಕ್ಷನ್‌ಗೆ ಸಮಯಾಭಾವ; ತತ್ತರಿಸಿದ ರಾಜಕೀಯ ಪಕ್ಷಗಳು
ಶ್ರೀನಿವಾಸರಪುರ: ಹಠಾತ್ತನೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲು ಅಧಿಸೂಚನೆ ಹೊರಬಿದ್ದಿರುವುದರಿಂದ ಇಲ್ಲಿನ ಪುರಸಭೆ 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜನೆ ಹಾಕುವುದಕ್ಕೆ ಸಮಯವಿಲ್ಲದೆ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಕಡಿಮೆ ಅವಧಿಯಿಂದ ತತ್ತರಿಸಿ ಹೋಗಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯು ಇನ್ನು ಬಹಳ ದೂರ ಇದೆ ಎಂದು ಪುರಸಭೆಯ ಆಡಳಿತವನ್ನು ವಿಸರ್ಜನೆಗೊಳಿಸುವುದಕ್ಕಿಂತ ಮುಂಚಿತವಾಗಿಯೇ ಚುನಾವಣೆಯ ದಿನಾಂಕ ಹೊರ ಬಿದ್ದಿರುವುದರಿಂದ ಅಧ್ಯಕ್ಷಗಾದಿಗಾಗಿ ತೀವ್ರ ಸರ್ಕಸ್ ಮಾಡಿ ಅಧ್ಯಕ್ಷರಾಗಿರುವವರು ಪುರಸಭೆ ಸಿಬ್ಬಂದಿಯ ಹಾಜರಾತಿ ಪುಸ್ತಕದಲ್ಲಿರುವ ಯಾವ ಯಾವ ಶಾಖೆಗಳಲ್ಲಿ ಯಾವ ಯಾವ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆಂಬುದರ ಬಗ್ಗೆ ಹಾಗೂ ಪಟ್ಟಣದ ಅಭಿವೃದ್ದಿಯ ಬಗ್ಗೆ ಯೋಜನೆಯನ್ನು ಹಾಕಿಕೊಳ್ಳುವುದಕ್ಕೂ ಆಗದೆ ಬೇಸತ್ತು ಹೋಗಿದ್ದಾರೆ.
ಈ ಪುರಸಭೆಯ ವ್ಯಾಪ್ತಿಗೆ 23 ವಾರ್ಡ್‌ಗಳು ಕಾಂಗ್ರೆಸ್, ಜೆ.ಡಿ.ಎಸ್, ಬಿ.ಜೆ.ಪಿ. ಹಾಗೂ ಇತರೆ ಮಿತ್ರ ಪಕ್ಷಗಳು ತಮ್ಮ ತಮ್ಮ ಪಕ್ಷದಿಂದ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಎಲ್ಲಾ ಮುಖಂಡರುಗಳು ಒಂದೆಡೆ ಕುಳಿತು ಚರ್ಚಿಸುವುದಕ್ಕೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.