ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗರಾಭಿವೃದ್ಧಿ ಹಣ ವರ್ತೂರ್ ಭಟ್ಟಂಗಿಗಳ ಸ್ವಾಹ: ಶ್ರೀನಿವಾಸಗೌಡ

Rashmi Kasaragodu
Updated On : 16 Feb 2013, 12:15 pm

ಕೋಲಾರ: ರಾಜ್ಯ ಸರ್ಕಾರ ಕೋಲಾರ ನಗರಸಭೆಗೆ 100 ಕೋಟಿಗೂ ಹೆಚ್ಚು ಅನುದಾನ ನೀಡಿದ್ದರೂ ಸಾಧನೆ ಮಾತ್ರ ಶೂನ್ಯವೆಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಆರೋಪಿಸಿದರು.
ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ಸಭೆ ನಡೆಸಿ, ಸಚಿವ ವರ್ತೂರ್ ಪ್ರಕಾಶ್ ಬೆಂಬಲಿಗರು ನಗರದ ಅಭಿವೃದ್ಧಿ ನೆಪದಲ್ಲಿ ತಮ್ಮ ಅಭಿವೃದ್ಧಿ ಕಂಡು ತೊಂಡಿದ್ದಾರೆಂದು ಟೀಕಿಸಿದರು. ಸಚಿವರ ಭಟ್ಟಂಗಿಗಳು ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ. ವರ್ತೂರು ಪ್ರಕಾಶ್ ಮತ್ತೆ ಅಂತಹುದೇ ಪಡೆಯನ್ನು ಸ್ಪರ್ಧೆಗಿಳಿಸಿ ನಗರದ ಜನತೆಗೆ ದ್ರೋಹ ಮಾಡಲು ಹೊರಟಿರುವುದರಿಂದ ಕಾರ್ಯಕರ್ತರು ಎಚ್ಚರವಹಿಸಿ ಕೆಲಸ ಮಾಡಬೇಕೆಂದರು.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ.ಮುನಿಯಪ್ಪ, ಶ್ರೀಕೃಷ್ಣ, ಜಿ.ರಾಮರಾಜು, ರವೀಂದ್ರ ಕುಮಾರ್, ದಯಾನಂದ್, ಜಾಕಿರ್ ಹುಸ್ಸೇನ್, ಮುಬಾರಕ್, ಇಬ್ರತ್ತುಲ್ಲಾಖಾನ್ , ಅಫ್ರೋಜಜ್ಪಾಷ ಮಾತನಾಡಿದರು. ನಾಗನಾಳ ಸೋಮಣ್ಣ, ಅಣ್ಣಿಹಳ್ಳಿ ಕೃಷ್ಣಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಂಕರೇಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement