ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾರ್ಚ್ 2 ರಿಂದ ವಾಲಿಬಾಲ್ ಪಂದ್ಯಾವಳಿ

Rashmi Kasaragodu
Updated On : 16 Feb 2013, 12:15 pm

ಮಾಲೂರು: ತಾಲೂಕಿನ ದೊಡ್ಡಶಿವಾರದ ಗಂಗಾಧರೇಶ್ವರ ಯುವಕರ ಸಂಘವು ಮಾರ್ಚ್ 2 ಹಾಗೂ 3 ರಂದು ರಾಜ್ಯ ಮಟ್ಟದ ಹಗಲು ಮತ್ತು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಂಡಿದೆ.
ಅಕಾಲಿಕ ಮರಣಕ್ಕೆ ತುತ್ತಾಗಿದ್ದ ಗ್ರಾ.ಪಂ ಸದಸ್ಯ ರಘುನಾಥ್, ಮುನಿನಾರಾಯಣಪ್ಪ ಹಾಗೂ ಕ್ರೀಡಾ ಪಟು ಬಾಬು ರೆಡ್ಡಿರವರ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಂಡಿದ್ದು, ಆಸಕ್ತ ರಾಜ್ಯದ ವಿವಿಧೆಡೆ ತಂಡಗಳು ಭಾಗವಹಿಸುವಂತೆ ಸಂಘಟಕ ಬುಜ್ಜಿ ಶ್ರೀನಾಥ್ ತಿಳಿಸಿದ್ದಾರೆ.
ಪ್ರಥಮ ಬಹುಮಾನವಾಗಿ 50 ಸಾವಿರ ರು ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ 30 ಸಾವಿರ ರು, ತೃತೀಯ ಬಹುಮಾನ 20 ಸಾವಿರ ರು. ಹಾಗೂ ಚತುರ್ಥ ಬಹುಮಾನವಾಗಿ ಹತ್ತು ಸಾವಿರ ರು.ಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ತಂಡವು 200 ರು.ಗಳನ್ನು ಪ್ರವೇಶ ಶುಲ್ಕವಾಗಿ ನೀಡಬೇಕಾಗಿದ್ದು, ಕ್ರೀಡಾಪಟುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಹೆಚ್ಚಿನ ವಿವಿರಕ್ಕಾಗಿ ಶ್ರೀನಾಥ್ (9972910301),ಡಿ.ಎಸ್.ರವೀಂದ್ರ ರೆಡ್ಡಿ (9448765265),ಹರೀಶ್ (8971114999), ಕಿರಣ್ (9901505058)ಅನಂತ್ ರೆಡ್ಡಿ (8147457875)ರನ್ನು ಸಂಪರ್ಕಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement