ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಿಗಳ ನೇಮಿಸಿ ಜಿಲ್ಲಾಧಿಕಾರಿ ಸೂಚನೆ

Parashurama
Updated On : 17 Feb 2013, 12:28 pm

ಚಿಂತಾಮಣಿ:  ಇಲ್ಲಿನ ನಗರಸಭೆಯ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣಾ ಅಧಿಕಾರಿ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರು ನೇಮಕ ಮಾಡಿ ತಾಲೂಕು ದಂಡಾಧಿಕಾರಿಗೆ ಸೂಚನೆ ನೀಡಿದ್ದಾರೆ.
ನಗರಸಭೆಯ 31 ವಾರ್ಡ್‌ಗಳಿಗೆ ಸಂಬಂಧಪಟ್ಟಂತೆ ವಾರ್ಡ್ 1 ರಿಂದ 8 ರವರೆಗೆ ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ನರಸಿಂಹಮೂರ್ತಿ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಕೃಷಿ ಅಧಿಕಾರಿ ಅಮಿದ್ ಪಾಷ, 9 ರಿಂದ 16 ರವರೆಗೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ.ಸುಬ್ರಾನಾಯಕ್, ಸಹಾಯಕ ಮಾವು ಅಭಿವೃದ್ಧಿ ಕೇಂದ್ರ ನಿರ್ದೇಶಕ ಆನಂದ್, 17 ರಿಂದ 25 ರವರೆಗೂ ಕ್ರೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ, ತೋಟಗಾರಿಕೆ ಹಿರಿಯ ನಿರ್ದೇಶಕ, 26 ರಿಂದ 31 ರತನಕ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕೋಪಯೋಗಿ ಇಲಾಖೆಯ ನಾಗರಾಜ್, ರೇಷ್ಮೆ ಸಹಾಯಕ ನಿರ್ದೇಶಕ ಕಾಳಪ್ಪ ನಗರಸಭೆ ಚುನಾವಣೆ ಅಧಿಕಾರಿಗಳಾಗಿ ನಡೆಸಲು ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement