ವಿರೂಪಾಕ್ಷೇಶ್ವರಸ್ವಾಮಿ ಬ್ರಹ್ಮ ರಥೋತ್ಸವ
ಮುಳಬಾಗಲು: ತಾಲೂಕು ವಿರೂಪಾಕ್ಷಿ ಗ್ರಾಮದ ವಿರೂಪಾಕ್ಷೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಸರ್ಕಾರದ ಪರವಾಗಿ ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ರಥೋತ್ಸವಕ್ಕೆ ಸರ್ಕಾರದ ಪರವಾಗಿ ಚಾಲನೆ ಮಾಡಿದರು. ಶಾಸಕ ಅಮರೇಶ್, ಜಿ.ಪಂ. ಸದಸ್ಯ ಆನಂದರೆಡ್ಡಿ, ಮುಖಂಡರಾದ ಕಲ್ಲುಪಲ್ಲಿ ಪ್ರಕಾಶ್, ಚಿಕ್ಕವೆಂಕಟಪ್ಪ, ರಾಜಸ್ವ ನಿರೀಕ್ಷಕ ಬಿ.ಆರ್. ಮುನಿವೆಂಕಟಪ್ಪ ಮುಂತಾದವರು ಭಾಗವಹಿಸಿದ್ದರು.