ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೇಕಲ್‌ನಲ್ಲಿ ದಲಿತ ಐಕ್ಯತಾ ವೇದಿಕೆ ಕಾರ್ಯಕ್ರಮ (ಸುದ್ದಿ ಸಂಕ್ಷೇಪ)

Mainashree
Updated On : 19 Feb 2013, 10:23 am

ಟೇಕಲ್: ದಲಿತರು ಹಾಡುತ್ತಿದ್ದ ಹಾಡಿನಿಂದ ದಲಿತ ಚಳುವಳಿಗಳು ಹುಟ್ಟಿದ್ದು, ಜನರ ಬದುಕಿನ ಹಾಡು, ನೋವಿನ ಹಾಡು ಹೀಗೆ ಹಲವಾರು ರೀತಿ ಹಾಡಿನಿಂದ ತಮಗೆ ಒದಗಿದ್ದ ಕಷ್ಟಗಳನ್ನು ಹಾಡಿನ ರೂಪದಲ್ಲಿ ತಿಳಿಸುತ್ತಿದ್ದರೆಂದು ಚಿಂತಕ ಗೊಲ್ಲಹಳ್ಳಿ ಶಿವ ಪ್ರಸಾದ್ ತಿಳಿಸಿದರು.ಅವರು ಟೇಕಲ್‌ನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಮಾಲೂರು ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ ಟೇಕಲ್ ಘಟಕ ಆಯೋಜಿಸಿದ್ದ ದಲಿತ ಐಕ್ಯತಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಆರಂಭದ ದಿನಗಳಲ್ಲಿ ದಲಿತ ಸಂಘಟನೆಗಳ ಸಂಘದವರು ಪ್ರತಿಯೊಂದು ಹಳ್ಳಿಗಳಲ್ಲಿ ಭೇಟಿ ನೀಡಿದ್ದಾಗ ಅಲ್ಲಿನ ಜನರ ಪ್ರೀತಿ ವಾತ್ಸಲ್ಯ ತಮ್ಮ ತಾಯಂದಿರ ಆರೈಕೆ ನಿಜಕ್ಕೂ ಶ್ಲಾಘನೀಯ ಹಾಗೂ ವಿವಿಧ ಮನೆಗಳ ಬಗೆಬಗೆಯ ತಿಂಡಿಗಳನ್ನು ಸಾಮೂಹಿಕವಾಗಿ ತಿನ್ನುತ್ತಿದೆವು ಎಂದರು. ರಾಜ್ಯ ದಲಿತ ಸಂಘರ್ಷ ಸಮಿತಿಯ ಮು.ತಿಮ್ಮಯ್ಯ ತಾ.ಪಂ. ಸದಸ್ಯೆ ನಿರ್ಮಲಾ ಆಂಜಿನಪ್ಪ, ಜಾನಪದ ಗಾಯಕ ರಾಮಯ್ಯ, ಕೆ.ಜೆ.ಎಸ್.ರಾಜ್ಯಾಧ್ಯಕ್ಷಎಸ್.ಮುನಿಸ್ವಾಮಿ, ನಿದರಮಂಗಲದ ವೆಂಕಟಸ್ವಾಮಿ, ಪುರಸನಹಳ್ಳಿ ಶ್ರೀನಿವಾಸ್, ಕೋಡೂರು ಗೋಪಾಲ್, ಚಿಕ್ಕಾಪುರ ಶ್ರೀನಿವಾಸ್, ತಿಪ್ಪಸಂದ್ರದ ಶ್ರೀನಿವಾಸ್, ಕೆ.ಜೆ.ಎಸ್ ತಾಲೂಕು ಅದ್ಯಕ್ಷ ಹೆಚ್.ಎಮ್.ಮುನಿಕೃಷ್ಣಪ್ಪ,ಟೇಕಲ್ ಆಂಜಿನಪ್ಪ, ಮುನಿರಾಜು ಉಪಸ್ಥಿತರಿದ್ದರು.

ಲೋಕಾಯುಕ್ತ ಕುಂದುಕೊರತೆ ಸಭೆ
ಗುಡಿಬಂಡೆ: ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಲೋಕಾಯುಕ್ತ ಕುಂದುಕೊರತೆಗಳ ಸಭೆಯನ್ನು ಮಂಗಳವಾರ ಏರ್ಪಡಿಸಲಾಗಿದ್ದು, ಸರಕಾರಿ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಏನಾದರೂ ಕೆಲಸ ಮಾಡಿಕೊಡುವಲ್ಲಿ ವಿಳಂಬ ತೋರಿದ್ದಲ್ಲಿ ಅಥವಾ ಲಂಚ ಕೇಳಿದ್ದಲ್ಲಿ ಅಂತಹವರ ವಿರುದ್ಧ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು.

ಶೈಕ್ಷಣಿಕ ಸಮಸ್ಯೆ: ಶಾಲಾ ಬಂದ್
ಗುಡಿಬಂಡೆ: ಶೈಕ್ಷಣಿಕ ರಂಗದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ನಿವಾರಿಸಬೆಕೆಂದು ಒತ್ತಾಯಿಸಿ ಎಸ್.ಎಫ್.ವೈ. ಘಟಕ ಫೆ 20ರಂದು ತಾಲ್ಲೂಕಿನ ಶಾಲಾ ಕಾಲೇಜ್ ಬಂದ್‌ಗೆ ಕರೆ ನೀಡಿದೆ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಪ್ರೊ.ಗೋವಿಂದ ವರದಿ ಚಾರಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಊಟದ ವೆಚ್ಚದಲ್ಲಿ ಹೆಚ್ಚಳ, ಮುಚ್ಚಿರುವ ಶಾಲೆಗಳ ಪುನಾರಂಭ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಘಟಕದ ತಾಲ್ಲೂಕು ಅದ್ಯಕ್ಷ ಎಲ್.ಎನ್.ಈಶ್ವರಪ್ಪ ತಿಳಿಸಿದ್ದಾರೆ.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಗುಡಿಬಂಡೆ: ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಡಿ.ವೈ.ಎಫ್.ಐ ಘಟಕದ ಸದಸ್ಯರು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಧರಣಿ ನಡೆಸಿದರು. ರಾಜ್ಯ ಬಿಜೆಪಿ ಸರ್ಕಾರದ ಯುವ ಜನವಿರೋದಿ ನೀತಿಗಳಿಂದ ಗ್ರಾಮಾಂತರ ಪ್ರದೇಶ ಯುವಕರು ನಿರುದ್ಯೋಗಿಗಳಾಗಿ ಪಟ್ಟಣಕ್ಕೆ ವಲಸೆ ಹೋಗುವ ಪರಿಸ್ತಿತಿ ಉಂಟಾಗಿದೆ. 2008ರ ವಿಧಾನ ಸಭಾಚುಣಾವಣೆ  ಸಂದರ್ಭದಲ್ಲಿ ವರ್ಷಕ್ಕೆ ಒಂದು ಲಕ್ಷ ಉದ್ಯೋಗಗಳನ್ನು ಸ್ಪಷ್ಟ ಪಡಿಸಲಾಗುವುದೆಂದು ಹೇಳಿದ್ದ ಸರ್ಕಾರ ಯುವಜನತೆಯನ್ನು ವಂಚಿಸಿದೆ. ಸರ್ಕಾರಿ ನೌಕರರ ನಿವೃತ್ತ ವಯ್ಯಸನ್ನು 58ರಿಂದ60 ವರ್ಷಗಳಿಗೆ
ಏರಿಸುವ ಮೂಲಕ ಲಕ್ಷಾಂತರ ಯುವಕರು ನೌಕರಿ ಸಿಗದೆ ಕಂಗಾಲಾಗಿದ್ದಾರೆ. ಸರ್ಕಾರದ ಭರವಸೆ ಹುಸಿಯಾಗಿದೆಯೆಂದು ಘಟಕದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.  ಖಾಲಿಯಿರುವ 2ಲಕ್ಷ ಸರ್ಕಾರಿ ಹುದ್ದಗಳನ್ನು ಕೂಡಲೆ ಭರ್ತಿ ಮಾಡಬೇಕು. ಹಲವಾರು ವರ್ಷಗಳಿಂದ ಹೋರಗುತ್ತಿಗೆ ಗೌರವಧನ ಮುಂತಾದ ಆಧಾರದ ಮೇಲೆ ದುಡಿಯುತ್ತಿರುವ ನೌಕರರ ಕಾಯಂಗೊಳಿಸಿ  ಅಸಂಘಟಿತವಲಯದಲ್ಲಿನ ಯುವಜನರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ತಾಲೂಕಿನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿ ಯುವ ಜನರ ಪರ ಬಜೆಟ್ ಮಂಡಿಸಬೇಕೆಂದು ಒತ್ತಾಯಿಸಿ ರಾಜ್ಯ ಸಮಿತಿ ಕರೆ ಮೆರೆಗೆ ಧರಣಿ ನಡೆಸುತ್ತಿರುವುದಾಗಿ ಘಟಕದ ಅದ್ಯಕ್ಷ ರಾಮನಾಥ್, ಆದಿನಾರಾಯಣ ಸ್ವಾಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement